
ಫ್ಯೂಶನ್ ಫುಡ್‌ಗಳು ಪುಳಕಗೊಳಿಸುವಷ್ಟೇ ಒಮ್ಮೊಮ್ಮೆ ತಮ್ಮ ವೈಚಿತ್ರ‍್ಯದಿಂದ ’ಹೀಗೂ ಉಂಟೇ’ ಎಂದು ಮೂಗು ಮುರಿಯುವಂತೆ ಮಾಡಿಬಿಡುತ್ತವೆ.
ಚಹಾ ಅಂಗಡಿಯವರೊಬ್ಬರು ತಾವು ಮಾಡುವ ಟೀನಲ್ಲಿ ಬೆಣ್ಣೆ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹೌದು, ನಮ್ಮ ಪ್ರೀತಿಯ ಚಹಾಗೆ ಹೀಗೂ ಒಂದು ಹೊಸ ಅವತಾರ ಕೊಡಲಾಗಿದೆ. ಆಗ್ರಾದ ಬಾಬಾ ಟೀ ಸ್ಟಾಲ್‌ನಲ್ಲಿ ಈ ಪ್ರಯೋಗ ಮಾಡಲಾಗಿದೆ.
ಸಾಮಾನ್ಯವಾಗಿ ಟೀಯಲ್ಲಿ ಶುಂಠಿ ಅಥವಾ ಏಲಕ್ಕೆ ಹಾಕುತ್ತಾರೆ. ಆದರೆ ಕುದಿಯುವ ಟೀ ಒಳಗೆ ಬೆಣ್ಣೆ ಹಾಕುವುದನ್ನು ಯಾರೂ ಸಹ ನಿರೀಕ್ಷೆ ಮಾಡಿರಲಿಲ್ಲ. ನ್ಯೂಟೆಲ್ಲಾ ಬಿರಿಯಾನಿ, ಮ್ಯಾಗಿ ಪಾನಿಪುರಿಯಂಥ ವಿಚಿತ್ರ ಕಾಂಬೋಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ ಮಕ್ಕನ್‌ವಾಲೀ ಚಾಯ್.
https://www.instagram.com/p/CJpf8iZl-Y5/?utm_source=ig_web_copy_link