ಪ್ರಧಾನಿ ಮೋದಿ ಮೇಲ್ನೋಟಕ್ಕೆ ಒಳ್ಳೆಯವರಂತೆ ಕಾಣಿಸಿಕೊಳ್ಳುತ್ತ ಅಂತರ್ಯದಲ್ಲಿ ದುರ್ಯೋಧನನ ವರ್ತನೆ ತೋರುತ್ತಿದ್ದಾರೆ. ಅವರು ಪ್ರತಿಪಕ್ಷದ ನಾಯಕರನ್ನು ದಮನಗೊಳಿಸಲು ಅನುಸರಿಸುತ್ತಿರುವ ನೀತಿ ಹಾಗೂ ಸೇಡಿನ ರಾಜಕಾರಣವನ್ನು ಬಿಡಬೇಕು ಎಂದು ಸಂಶೋಧಕ ನಾಡೋಜ ಹಂಪ ನಾಗರಾಜಯ್ಯ ಒತ್ತಾಯಿಸಿದ್ದಾರೆ.
ಮಂಡ್ಯ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕಾಯ್ದೆ ರದ್ದುಗೊಳಿಸಲು ಹೋರಾಟ ನಡೆಸುತ್ತಿರುವ ರೈತರ ವಿಚಾರದಲ್ಲಿ ಕೇಂದ್ರ ಸರ್ಕಾರ ಗೋಮುಖ ವ್ಯಾಘ್ರನಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಅಲ್ಲದೆ ಮಠಾಧೀಶರು ಸರಕಾರ ನಿಯಂತ್ರಿಸಲು ಮುಂದಾಗುವ ಕೆಲಸ ಬಿಡಬೇಕು ಎಂದು ಆಗ್ರಹಿಸಿದ ಹಂಪ ನಾಗರಾಜಯ್ಯ, ಇಂಥವರನ್ನೇ ಮಂತ್ರಿಗಳನ್ನಾಗಿ ಮಾಡಿ ಎಂದು ಮಠಾಧೀಶರು, ರಾಜಕಾರಣಿಗಳ ಬಳಿ ಹೋಗಿ ಒತ್ತಾಯಿಸುವುದು ತರವಲ್ಲ ಎಂದು ಅಭಿಪ್ರಾಯಪಟ್ಟರು.