ಬೆಳಿಗ್ಗಿನ ತಿಂಡಿ ಅಥವಾ ಸಂಜೆಯ ಸ್ಯಾಕ್ಸ್ ಗೆ ಸುಲಭವಾಗಿ ಮಾಡಬಹುದಾದ ತಿನಿಸು ಇದ್ದರೆ ಕೆಲಸವೂ ಕಡಿಮೆ ಆಗುತ್ತದೆ, ಹಾಗೇ ಹೊಟ್ಟೆಯೂ ತುಂಬುತ್ತದೆ.ಇಲ್ಲಿ ಆರೋಗ್ಯಕರವಾದ ಪಾಲಕ್ ಧೋಕ್ಲಾ ಇದೆ ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
½ ಕಪ್-ಓಟ್ಸ್ ಪುಡಿ, ½ ಕಪ್-ರವೆ, ½ ಕಪ್-ಸಣ್ಣಗೆ ಹಚ್ಚಿಟ್ಟುಕೊಂಡ ಪಾಲಕ್, ¼ ಕಪ್-ಮೊಸರು, ½ ಟೀ ಸ್ಪೂನ್-ಹಸಿಮೆಣಸಿನ ಪೇಸ್ಟ್, ಉಪ್ಪು-ರುಚಿಗೆ ತಕ್ಕಷ್ಟು, ½ ಟೀ ಸ್ಪೂನ್ ಫ್ರೂಟ್ ಸಾಲ್ಟ್.
ಮಾಡುವ ವಿಧಾನ:
ಒಂದು ಬೌಲ್ ಗೆ ಓಟ್ಸ್, ರವೆ, ಮೊಸರು, ಹಸಿಮೆಣಸಿನ ಪೇಸ್ಟ್, ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ½ ಕಪ್ ನೀರು ಸೇರಿಸಿ ಮಿಕ್ಸ್ ಮಾಡಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಇದಕ್ಕೆ ಪಾಲಕ್ ಸೇರಿಸಿ 2 ಟೇಬಲ್ ಸ್ಪೂನ್ ನೀರು ಹಾಕಿ ಮಿಕ್ಸ್ ಮಾಡಿ ಹಿಟ್ಟು ಇಡ್ಲಿಯ ಹದಕ್ಕೆ ಇರಲಿ. ಆಮೇಲೆ ಇದಕ್ಕೆ ಫ್ರೂಟ್ಸ್ ಸಾಲ್ಟ್ ಸೇರಿಸಿ ¼ ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ ಸ್ಟೀಮರ್ ನಲ್ಲಿ 10 ನಿಮಿಷಗಳ ಕಾಲ ಬೇಯಿಸಿಕೊಂಡರೆ ರುಚಿಯಾದ ಧೋಕ್ಲಾ ಸವಿಯಲು ರೆಡಿ.