ಅಮೆರಿಕದ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕರ ಪ್ರಮಾಣ ವಚನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವಂತೆಯೇ ಸಾಮಾಜಿಕ ಜಾಲತಾಣ ಟ್ವಿಟರ್, ಶ್ವೇತ ಭವನದ ಉನ್ನತ ಮಂದಿಗೆ ವಿಶೇಷ ಖಾತೆಗಳನ್ನು ಆರಂಭಿಸಲು ಸಿದ್ದತೆ ನಡೆಸುತ್ತಿದೆ.
ಇದೇ ಮೊದಲ ಬಾರಿಗೆ ಅಮೆರಿಕದ ಸೆಕೆಂಡ್ ಜಂಟಲ್ಮನ್ಗೆಂದು ಬ್ಲೂಟಿಕ್ ಖಾತೆಯನ್ನು ತೆರೆಯಲಾಗಿದೆ. ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಪತಿ ಡಗ್ಲಾಸ್ ಎಮಾಫ್ ಅವರಿಗೆ ಈ ಖಾತೆಯನ್ನು ಮೀಸಲಿಡಲಾಗಿದ್ದು, ಆರಂಭಗೊಂಡ ಮೊದಲ ದಿನವೇ ನಾಲ್ಕು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಪಡೆದುಕೊಂಡಿದೆ.
ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಅವರ ಪತಿ ಡಗ್ಲಾಸ್ರ ಟ್ವಿಟರ್ ಖಾತೆಯನ್ನು, “ಭವಿಷ್ಯದ ಸೆಕೆಂಡ್ ಜಂಟಲ್ಮನ್, ಬದ್ಧ ತಂದೆ, ಉಪಾಧ್ಯಕ್ಷೆ ಹ್ಯಾರಿಸ್ರ ಹೆಮ್ಮೆಯ ಪತಿ’ ಎಂದು ಪರಿಚಯಿಸಲಾಗಿದೆ.
ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡೆನ್ ಅವರು ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸದ್ಯಕ್ಕೆ @PresElectBiden ಎಂದು ಟ್ವಿಟರ್ ಹ್ಯಾಂಡಲ್ ಹೊಂದಿರುವ ಬಿಡೆನ್ 20ನೇ ತಾರೀಖಿನಿಂದ ಆಚೆಗೆ @POTUSಹೆಸರಿನಲ್ಲಿ ಹ್ಯಾಂಡಲ್ ಇಟ್ಟುಕೊಳ್ಳಲಿದ್ದಾರೆ.
https://twitter.com/KikkiPlanet/status/1349935068668592128?ref_src=twsrc%5Etfw%7Ctwcamp%5Etweetembed%7Ctwterm%5E1349935068668592128%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Ftwitter-creates-second-gentleman-account-7149015%2F