ಕೋವಿಡ್-19 ಕಾರಣದಿಂದ ನಿರ್ಮಾಣ ಕಾರ್ಯ ಪೋಸ್ಟ್ಪೋನ್ ಮಾಡಲಾಗಿದ್ದ ಬಾಕ್ಸಿಂಗ್ ಆಧರಿತ ತೆಲುಗು ಸಿನೆಮಾದ ಶೂಟಿಂಗ್ ಕೆಲಸ ಮರುಆರಂಭವಾಗಲು ಸಿದ್ಧತೆ ನಡೆಸಲಾಗುತ್ತಿದೆ.
ವರುಣ್ ತೇಜ್ ಈ ಚಿತ್ರದಲ್ಲಿ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಕಿರ್ರಣ್ ಕೊರ್ರಾಪತಿ ಸಿನೆಮಾ ನಿರ್ಮಾಣಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. #VT10 ಎಂದು ಸದ್ಯಕ್ಕೆ ಕರೆಯಲಾಗುವ ಈ ಚಿತ್ರದ ಮೊದಲ ಲುಕ್ ಅನ್ನು ಜನವರಿ 19ರಂದು ಬಿಡುಗಡೆ ಮಾಡಲಾಗುತ್ತದೆ.
ಸದ್ಯಕ್ಕೆ ಹಬ್ಬಿರುವ ವದಂತಿಗಳನ್ನು ನಂಬುವುದಾದರೆ, ಉಪೇಂದ್ರ, ಸುನೀಲ್ ಶೆಟ್ಟಿ ಹಾಗೂ ಸೈ ಮಂಜ್ರೇಕರ್ ಸಹ ಈ ಬಿಗ್ ಬಜೆಟ್ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಪಾತ್ರಕ್ಕೆ ಹುರಿಗೊಳ್ಳಲೆಂದು ವರುಣ್ ಅವರು ಲಾಸ್ ಏಂಜಲೀಸ್ನಲ್ಲಿ ಎರಡು ತಿಂಗಳು ತಮ್ಮ ದೇಹವನ್ನು ದಂಡಿಸಿದ್ದಾರೆ. ಒಲಿಂಪಿಕ್ ಚಿನ್ನದ ವಿಜೇತ ಟೋನಿ ಜೆಫ್ರಿಸ್ರಿಂದ ವರುಣ್ ತರಬೇತಿ ಪಡೆದುಕೊಂಡಿದ್ದು, ’ರಾಕಿ’ ಚಿತ್ರದ ನಟ ಕಾರ್ಲ್ ವೆದರ್ಸ್ ಕನ್ಸಲ್ಟೆಂಟ್ ಆಗಿ ನಟಿಸಲಿದ್ದಾರೆ.