alex Certify ಅಮೆರಿಕ ಅಧ್ಯಕ್ಷರ ಟೀಂಗೆ ಭಾರತ ಮೂಲದ ಮತ್ತೊಬ್ಬರ ನೇಮಕ, ಉನ್ನತ ಹುದ್ದೆಗೇರಿದ ಕಾಶ್ಮೀರದ 2 ನೇ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಅಧ್ಯಕ್ಷರ ಟೀಂಗೆ ಭಾರತ ಮೂಲದ ಮತ್ತೊಬ್ಬರ ನೇಮಕ, ಉನ್ನತ ಹುದ್ದೆಗೇರಿದ ಕಾಶ್ಮೀರದ 2 ನೇ ಮಹಿಳೆ

ಕಾಶ್ಮೀರ ಮೂಲದ ಸಮೀರಾ ಫಾಜಿಲಿ ಅವರು ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ಅವರ ತಂಡವನ್ನು ಸೇರಿಕೊಂಡಿದ್ದಾರೆ. ಅಂದ ಹಾಗೆ, ಅನೇಕ ಭಾರತೀಯರಿಗೆ ಬೈಡೆನ್ ಆಡಳಿತದಲ್ಲಿ ಉನ್ನತ ಹುದ್ದೆ ನೀಡಲಾಗಿದೆ.

ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇವರೊಂದಿಗೆ ಭಾರತೀಯ ಮೂಲದ ಅನೇಕರು ಉನ್ನತ ಸ್ಥಾನಕ್ಕೆ ಏರಿದ್ದಾರೆ. ಕಾಶ್ಮೀರ ಮೂಲದ ಸಮೀರಾ ಫಾಜಿಲಿ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ನೇಮಕವಾಗಿದ್ದಾರೆ.

ಶ್ರೀನಗರದಲ್ಲಿ ಸಮೀರಾ ಫಾಜಿಲಿ ಕುಟುಂಬದವರು ನೆಲೆಸಿದ್ದಾರೆ. ಅವರ ಚಿಕ್ಕಪ್ಪ ರೂಫ್ ಫಾಜಿಲಿ ಸಂತಸ ವ್ಯಕ್ತಪಡಿಸಿದ್ದು, ಇದು ಭಾರತೀಯರಿಗೆ ಸಂತಸದ, ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.

ಸಮೀರಾ ಫಾಜಿಲಿ ಪೋಷಕರು 1970 – 71 ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಅಮೆರಿಕಕ್ಕೆ ತೆರಳಿದ್ದರು. ಸಮೀರಾ ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸದಿದ್ದರೂ ಉತ್ತಮವಾದ ಸಂಬಂಧವನ್ನು ಹೊಂದಿದ್ದಾರೆ. 2007 ರಲ್ಲಿ ಆಕೆ ಕೊನೆಯ ಬಾರಿಗೆ ಕಣಿವೆಗೆ ಭೇಟಿ ನೀಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ರೂಫ್ ಫಾಜಿಲಿ.

ಅಮೆರಿಕ ಚುನಾಯಿತ ಅಧ್ಯಕ್ಷರ ತಂಡದಲ್ಲಿ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ನೇಮಕಗೊಂಡ ಅವರು ಬ್ಯುಸಿಯಾಗಿದ್ದರಿಂದ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಆದರೆ, ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಸಮಿರಾ ಅವರ ತಂದೆ, ತಾಯಿ ವೈದ್ಯರಾಗಿದ್ದಾರೆ. ಮಗಳು ಕೂಡ ವೈದ್ಯೆ ಆಗಬೇಕೆಂದು ಅವರು ಬಯಸಿದ್ದರು. ಆದರೆ, ಆಕೆ ಸಾರ್ವಜನಿಕ ಸೇವೆಯ ಬಗ್ಗೆ ಆಸಕ್ತಿಯನ್ನು ಹೊಂದಿದ್ದರು. ಈ ಮೊದಲು ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ಅಟ್ಲಾಂಟಾದಲ್ಲಿ ಕಾರ್ಯನಿರ್ವಹಿಸಿದ್ದ ಸಮೀರಾ ಆರ್ಥಿಕ ಅಭಿವೃದ್ಧಿಯ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಡಿಸೆಂಬರ್ ನಲ್ಲಿ ಕಾಶ್ಮೀರಾ ಮೂಲದ ಮಹಿಳೆ ಆಯೇಷಾ ಶಾ ಅವರನ್ನು ಶ್ವೇತಭವನದ ಆಫೀಸ್ ಆಫ್ ಡಿಜಿಟಲ್ ಸ್ಟ್ರಾಟಜಿಯಲ್ಲಿ ಸಹ ವ್ಯವಸ್ಥಾಪಕರಾಗಿ ನೇಮಕ ಮಾಡಲಾಗಿದೆ. ಬರಾಕ್ ಒಬಾಮ ಆಡಳಿತದಲ್ಲಿ ಸಮೀರಾ  ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಹಿರಿಯ ಸಲಹೆಗಾರರಾಗಿ ಮತ್ತು ದೇಶೀಯ ಹಣಕಾಸು, ಅಂತರರಾಷ್ಟ್ರೀಯ ವ್ಯವಹಾರಗಳ ಅಮೆರಿಕ ಖಜಾನೆ ಇಲಾಖೆಯಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಮೊದಲು ಯೇಲ್ ಕಾನೂನು ಶಾಲೆಯಲ್ಲಿ ಕಾನೂನು ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ಪತಿ, ಮೂವರು ಮಕ್ಕಳೊಂದಿಗೆ ಜಾರ್ಜಿಯಾದಲ್ಲಿ ನೆಲೆಸಿರುವ ಅವರು ಯೇಲ್ ಲಾ ಸ್ಕೂಲ್ ಮತ್ತು ಹಾರ್ವರ್ಡ್ ಕಾಲೇಜಿನ ಪದವೀಧರರಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...