ಪ್ರಮೋದ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಲಂಕಾಸುರ’ ಸಿನಿಮಾ ಮುಹೂರ್ತವನ್ನು ಸಂಕ್ರಾಂತಿ ಹಬ್ಬದ ದಿನ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ನೆರವೇರಿಸಿದ್ದಾರೆ.
ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹಾಗೂ ಲೂಸ್ ಮಾದ ಯೋಗಿ ನಟಿಸಿದ್ದು, ಎ ಎಂ ಎಸ್ ಪ್ರೊಡಕ್ಷನ್ಸ್ ಲಾಂಛನದಿಂದ ಹೇಮಾವತಿ ಮುನಿಸ್ವಾಮಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪಾರ್ವತಿ ಅರುಣ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.