ಬಾಲಿವುಡ್ ಚಿತ್ರ ನಿರ್ದೇಶಕಿ, ನಿರ್ಮಾಪಕಿ ಫರಾ ಖಾನ್ ಅವರು ತಮ್ಮ ಸೋದರ ಸಂಬಂಧಿ ನಟ ಫರಾನ್ ಅಖ್ತರ್ ಜೊತೆಗಿನ ಬಾಲ್ಯದ ಚಿತ್ರವೊಂದನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಫ್ಲ್ಯಾಶ್ ಬ್ಯಾಕ್ ನ ನೆನಪು ಮಾಡಿಕೊಂಡಿದ್ದಾರೆ.
ನಟ ಫರಾನ್ ಅಖ್ತರ್ ಕೂಡ ಬಾಲ್ಯದ ಈ ಚಿತ್ರ ಹಂಚಿಕೊಂಡು ಹಳೆಯ ನೆನಪು ಮಾಡಿಕೊಂಡಿರುವುದೂ ಅಲ್ಲದೆ, ದಿ ವಂಡರ್ ಇಯರ್ಸ್ ಎಂದು ವ್ಯಾಖ್ಯಾನಿಸಿದ್ದಾರೆ.
ಫರಾ ಖಾನ್ ಹೇರ್ ಕಟ್ ಮಾಡಿಸಿಕೊಂಡು ಕಪ್ಪು ಸ್ಲೀವ್ ಲೆಸ್ ಬಟ್ಟೆ ಧರಿಸಿದ್ದರೆ, ಫರಾನ್ ಅಖ್ತರ್ ಬಿಳಿ ಅಂಗಿಯಲ್ಲಿ ಮಿಂಚುತ್ತಿದ್ದಾರೆ. ಇಬ್ಬರೂ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವ ರೀತಿ ಪೋಸ್ ಕೊಟ್ಟಿದ್ದು, ಫರಾ ಖಾನ್ ಅವರ ತಾಯಿ ಹಾಗೂ ಸಂಬಂಧಿಕರು ಖುಷಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇಡೀ ಚಿತ್ರ ಗಮನಿಸಿದರೆ, ಕುಟುಂಬದ ಯಾವುದೋ ಸಂಭ್ರಮಾಚರಣೆಯಲ್ಲಿ ಎಲ್ಲರೂ ಪಾಲ್ಗೊಂಡಂತಿದೆ. ಇಂಟರ್ ನೆಟ್, ವೈಫೈ, ಕಂಪ್ಯೂಟರ್ ಎಲ್ಲವೂ ಬರುವ ಮೊದಲು ಕುಣಿತ ಇತ್ತು. ಕೌಟುಂಬಿಕ ಬಾಂಧವ್ಯವಿತ್ತು. ನಮ್ಮ ಹಿಂದೆ ಸೀರೆಯುಟ್ಟು ನಗೆ ಚೆಲ್ಲಿರುವುದು ನನ್ನ ಅಮ್ಮ. ರೋಸಿ ಮಾಮಿ ಎಂದು ಫರಾ ಷರಾ ಬರೆದಿದ್ದಾರೆ.
https://www.instagram.com/p/CKDNljaA9k7/?utm_source=ig_web_copy_link
https://www.instagram.com/p/CKDTb1qh6V2/?utm_source=ig_web_copy_link