ಈ ನಗರವನ್ನ ನೀವು ಗುರುತಿಸಬಲ್ಲಿರಾ ಎಂಬ ಪ್ರಶ್ನೆಗೆ ಸ್ವತಃ ಉತ್ತರ ಕೊಟ್ರು ಪಿಎಂ…! 16-01-2021 12:06PM IST / No Comments / Posted In: Latest News, India ಏನೆ ಟ್ರೆಂಡಿಂಗ್ ವಿಚಾರ ಇರ್ಲಿ ಅದು ಮೊದಲು ಸುತ್ತಾಡಿಕೊಂಡು ಬರೋದು ಟ್ವಿಟರ್ ಅನ್ನೇ. ಹಾಗಂತ ಟ್ವಿಟರ್ನಲ್ಲಿ ಹಳೆಯ ವಿಚಾರಗಳು ಸದ್ದು ಮಾಡಲ್ಲ ಅಂತೇನಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ ಭವ್ಯವಾದ ದೇವಾಲಯ, ದೀಪಗಳ ಬೆಳಕಿನಿಂದಲೇ ಅಂದ ಹೆಚ್ಚಿಸಿಕೊಂಡ ನದಿ ತೀರ, ಹಬ್ಬದ ಆಚರಣೆಗಳನ್ನೊಳಗೊಂಡ ಫೋಟೋಗಳನ್ನ ಶೇರ್ ಮಾಡಿದ ಲಾಸ್ಟ್ ಟೆಂಪಲ್ ಎಂಬ ಟ್ವಿಟರ್ ಖಾತೆ, ಈ ಮಹಾ ನಗರವನ್ನ ಗುರುತಿಸಬಲ್ಲಿರೇ..? ಎಂದು ಪ್ರಶ್ನೆ ಮಾಡಿತ್ತು. ಲಾಸ್ಟ್ ಟೆಂಪಲ್ನ ಈ ಪ್ರಶ್ನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದ್ದಾರೆ. ಈ ಫೋಟೋದಲ್ಲಿರುವ ನಗರ ಉತ್ತರ ಪ್ರದೇಶದ ಕಾಶಿ ಹಾಗೂ ರತ್ನೇಶ್ವರ ದೇವಾಲಯ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಖಂಡಿತವಾಗಿಯೂ ನಾನಿದಕ್ಕೆ ಉತ್ತರ ನೀಡಬಲ್ಲೆ. ಕೆಲವು ವರ್ಷಗಳ ಹಿಂದೆ ನಾನೇ ಈ ಫೋಟೋವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದೆ. ಇದು ಕಾಶಿಯ ರತ್ನೇಶ್ವರ ಮಹದೇವ ದೇವಾಲಯ ಎಂದು ಬರೆದು ಟ್ವೀಟ್ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2017ರಲ್ಲಿ ದೀಪಾವಳಿ ಹಬ್ಬದ ವಿಶೇಷವಾಗಿ ಈ ಫೋಟೋಗಳನ್ನ ಹಂಚಿಕೊಂಡಿದ್ದರು. I surely can. 🙂 Had shared this picture a few years ago. This is Kashi's Ratneshwar Mahadev Temple, in its full glory. https://t.co/xp3u9iF1rH https://t.co/7NkPccOeYj — Narendra Modi (@narendramodi) January 15, 2021 Wonderful Dev Deepawali photos from Kashi! Have a look. pic.twitter.com/IjQXR52EHr — Narendra Modi (@narendramodi) November 4, 2017