ನವದೆಹಲಿ: ಯುವ ಸಮುದಾಯಕ್ಕೆ ಅಗತ್ಯ ತರಬೇತಿ ನೀಡುವ ಜೊತೆಗೆ ಉದ್ಯೋಗಾವಕಾಶ ದೊರಕಿಸಿಕೊಡಲು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ- 3(PMKVY) ಜಾರಿಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.
ದೇಶದ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳ 717 ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಆರಂಭವಾಗಿದ್ದು, ಈ ಸಾಲಿನಲ್ಲಿ 8 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಮುನ್ನೂರಕ್ಕೂ ಹೆಚ್ಚು ಕೌಶಲಪೂರ್ಣ ಕೋರ್ಸ್ಗಳನ್ನು ಪರಿಚಯಿಸಲಾಗಿದ್ದು ಡಿಜಿಟಲ್ ತಂತ್ರಜ್ಞಾನ ಕೈಗಾರಿಕೆ ವಲಯದ ಕೌಶಲಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಆತ್ಮ ನಿರ್ಭರ ಭಾರತಕ್ಕೆ ಅನುಗುಣವಾಗಿ ವಿಕೇಂದ್ರೀಕರಣಕ್ಕೆ ಆದ್ಯತೆಯ ನೀಡಲಾಗಿದ್ದು. ಜಿಲ್ಲಾ ಮಟ್ಟದ ಕೌಶಲ ಸಮಿತಿ, ರಾಜ್ಯಮಟ್ಟದ ಕೌಶಲ ಅಭಿವೃದ್ಧಿ ಮಿಷನ್ ಪಾತ್ರಗಳು ಮಹತ್ವದ್ದಾಗಿರುತ್ತವೆ. ಯುವಕರಿಗೆ ಕೌಶಲ್ಯ ತರಬೇತಿ ನೀಡಲು 948 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಲಾಗಿದೆ.