ಕೊರೊನಾ ಲಸಿಕೆ ಅಭಿಯಾನ ನಾಳೆಯಿಂದ ಶುರುವಾಗ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮೊದಲು ಲಸಿಕೆ ಯಾರು ಹಾಕಿಸಿಕೊಳ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.
ಮಧ್ಯಪ್ರದೇಶದ ಹರಿದೇವ್ ಎಂಬ ವ್ಯಕ್ತಿಗೆ ಕೊರೊನಾದ ಮೊದಲ ಲಸಿಕೆ ಬೀಳ್ತಿದೆ. ಹರಿದೇವ್ ಜೆಪಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿಯಾಗಿದ್ದಾರೆ. ಮೊದಲ ಬಾರಿ ಲಸಿಕೆ ಪಡೆಯುತ್ತಿರುವುದು ಖುಷಿ ತಂದಿದೆ ಎಂದು ಹರಿದೇವ್ ಹೇಳಿದ್ದಾರೆ. ಇದಕ್ಕಿಂತ ಲಸಿಕೆ ನಂತ್ರ ಪ್ರಧಾನಿ ಮೋದಿ ನನ್ನ ಜೊತೆ ಮಾತನಾಡಲಿದ್ದು, ಇದು ಮತ್ತಷ್ಟು ಖುಷಿ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಜನವರಿ 16ರ ಬೆಳಿಗ್ಗೆ 9 ಗಂಟೆಯಿಂದ ಲಸಿಕೆ ಹಾಕುವ ಕೆಲಸ ಶುರುವಾಗಲಿದೆ. ಈ ಲಸಿಕೆಯನ್ನು ಮುಂಚೂಣಿ ಕಾರ್ಮಿಕರು, ಪೊಲೀಸರು, ಕಂದಾಯ ಸಿಬ್ಬಂದಿಗೆ ಹಾಕಲಾಗುವುದು. ಈಗಾಗಲೇ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿ, ಸಾಮಾಜಿಕ ಕಾರ್ಯಕರ್ತರು, ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.