ಮುಂಬೈ: ಇತ್ತೀಚಿಗೆ ಲೋನ್ ಆಪ್ ಗಳಿಂದ ಗ್ರಾಹಕರಿಗೆ ಕಿರುಕುಳ ಹೆಚ್ಚಾಗ್ತಿರುವ ಹಿನ್ನಲೆಯಲ್ಲಿ ಕಡಿವಾಣ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ.
ಗೂಗಲ್ ಪ್ಲೇಸ್ಟೋರ್ ನಿಂದ ನೂರಾರು ಲೋನ್ ಆಪ್ ಗಳನ್ನು ರದ್ದು ಮಾಡಲಾಗಿದೆ. ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೂಗಲ್ ತಿಳಿಸಿದೆ. ಬಳಕೆದಾರರ ದೂರುಗಳು ಮತ್ತು ಸರ್ಕಾರ ನೀಡಿದ ಎಚ್ಚರಿಕೆಯ ನೆಲೆಯಲ್ಲಿ ವೈಯಕ್ತಿಕ ಲೋಲ್ ಆಪ್ ಗಳನ್ನು ಪ್ಲೇಸ್ಟೋರ್ ನಿಂದ ತೆಗೆದು ಹಾಕಲಾಗಿದೆ. ಗೂಗಲ್ ನಿಯಮ ಉಲ್ಲಂಘಿಸಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇನ್ನು ಮೊಬೈಲ್ ಆಪ್ ಮೂಲಕ ಸಾಲ ನೀಡುವ ಚೀನಾ ಕಂಪನಿಗಳ ಕಿರುಕುಳದ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮ ಕೈಗೊಳ್ಳಲು ಮುಂದಾಗಿದೆ. ಇಂತಹ ಆಪ್ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದೆ. ಕಿರುಕುಳದ ವಿರುದ್ಧ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಆರ್ಬಿಐ ಕ್ರಮ ಕೈಗೊಂಡಿದೆ ಎನ್ನಲಾಗಿದೆ.