‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ‘ಸಲಾರ್’ ಚಿತ್ರ ಶುಕ್ರವಾರ ಶುರುವಾಗಲಿದೆ.
ಹೈದರಾಬಾದ್ ನಲ್ಲಿ ಶುಕ್ರವಾರ ಪೂಜಾ ಸಮಾರಂಭದೊಂದಿಗೆ ಬಹುಭಾಷೆಯಲ್ಲಿ ನಿರ್ಮಾಣವಾಗಲಿರುವ ಚಿತ್ರಕ್ಕೆ ಚಾಲನೆ ನೀಡಲಾಗುವುದು. ಕಳೆದ ಡಿಸೆಂಬರ್ ನಲ್ಲಿ ಅಧಿಕೃತವಾಗಿ ಪೋಸ್ಟರ್ ನೊಂದಿಗೆ ‘ಸಲಾರ್’ ಚಿತ್ರದ ಬಗ್ಗೆ ಘೋಷಣೆ ಮಾಡಲಾಗಿತ್ತು.
ಅಕ್ಷನ್ ಥ್ರಿಲ್ಲರ್ ಮೂವಿ ಎಂದು ಹೇಳಲಾಗಿರುವ ‘ಸಲಾರ್’ ಚಿತ್ರಕ್ಕಾಗಿ ಪ್ರಭಾಸ್ ಸಿದ್ಧತೆ ಮಾಡಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ವಿಜಯ ಕಿರಂಗದೂರು ನಿರ್ಮಾಣ ಮಾಡಲಿರುವ ಚಿತ್ರದ ಆರಂಭ ನಾಳೆಯಿಂದ ಶುರುವಾಗಲಿದೆ.
ನಾಳಿನ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ, ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ. ಹಿಂದಿಯಲ್ಲಿ ಡಬ್ ಆಗಲಿರುವ ‘ಸಲಾರ್’ ಚಿತ್ರವನ್ನು ಅನಿಲ್ ಥಡಾನಿ ಬಿಡುಗಡೆ ಮಾಡಲಿದ್ದಾರೆ.