alex Certify ‘ಆಧಾರ್’ ಹೊಂದಿದವರಿಗೆ ಗುಡ್ ನ್ಯೂಸ್: ಮೊಬೈಲ್ ಗೆ ಲಿಂಕ್ ಆಗಿದ್ರೆ ಲಸಿಕೆ ಖಚಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಧಾರ್’ ಹೊಂದಿದವರಿಗೆ ಗುಡ್ ನ್ಯೂಸ್: ಮೊಬೈಲ್ ಗೆ ಲಿಂಕ್ ಆಗಿದ್ರೆ ಲಸಿಕೆ ಖಚಿತ

ನವದೆಹಲಿ: ನಿಮ್ಮ ಆಧಾರ್ ಕಾರ್ಡ್ ನಿಮ್ಮ ಮೊಬೈಲ್ ಸಂಖ್ಯೆಗೆ ಜೋಡಣೆಯಾಗಿದೆಯೇ? ಜನವರಿ 16 ರ ನಂತರ ಇದು ಬಹಳ ಮುಖ್ಯವಾಗಿರುತ್ತದೆ ಎಂಬುದನ್ನು ಗಮನಿಸಿ.

ಕೊರೋನಾ ವ್ಯಾಕ್ಸಿನೇಷನ್ ಗಾಗಿ ಫಲಾನುಭವಿಗಳನ್ನು ಆಧಾರ್ ಸಹಾಯದಿಂದ ಗುರುತಿಸಲಾಗುವುದು ಮತ್ತು ನಿಗದಿತ ಸಮಯದಲ್ಲಿ ಅವರಿಗೆ ಎರಡನೇ ಡೋಸ್ ನೀಡಲು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅತಿದೊಡ್ಡ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸುಮಾರು 3 ಕೋಟಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಇದರ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ.

ಜನವರಿ 16 ರಿಂದ ಆರಂಭವಾಗಲಿರುವ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ಕೆ ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಗೆ ಲಿಂಕ್ ಮಾಡುವುದು ಮುಖ್ಯವಾಗಿದೆ. ಲಸಿಕೆ ಹಾಕಬೇಕಾದವರನ್ನು ಗುರುತಿಸುವುದು ಮತ್ತು ಮೇಲ್ವಿಚಾರಣೆ ಮಾಡಲು ಆಧಾರ್ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.

ಕೋ ವಿನ್ ಡಿಜಿಟಲ್ ಪ್ಲಾಟ್ ಫಾರಂ ರಚಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಆಧಾರ್ ಸಹಾಯದಿಂದ ಫಲಾನುಭವಿಗಳನ್ನು ಗುರುತಿಸಲಾಗುವುದು. ಅವರಿಗೆ ಸಕಾಲದಲ್ಲಿ ಎರಡನೇ ಡೋಸೆಜ್ ಖಚಿತವಾಗುತ್ತದೆ.

ಒಬ್ಬ ವ್ಯಕ್ತಿ ವ್ಯಾಕ್ಸಿನೇಷನ್ ಕಾರ್ಯದಲ್ಲಿ ಮೊದಲ ಲಸಿಕೆ ಪಡೆದ ನಂತರ ಕೋ ವಿನ್ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ಪ್ರಮಾಣ ಪತ್ರ ರಚನೆಯಾಗಿ ಎರಡನೇ ಡೋಸೆಜ್ ಗೆ ಜ್ಞಾಪನೆ ನೀಡಲಾಗುತ್ತದೆ. ನಂತರ ಅಂತಿಮ ಪ್ರಮಾಣ ಪತ್ರ ನೀಡಲಾಗುವುದು. ವ್ಯಾಕ್ಸಿನೇಷನ್ ಗೆ ಸಂಬಂಧಿಸಿದಂತಹ ಎಲ್ಲಾ ಪ್ರಮುಖ ಮಾಹಿತಿಗಳನ್ನು ಆಧಾರ್ ಬಳಕೆದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಹಲವು ಉದ್ದೇಶಗಳಿಗೆ ಬಳಸುವ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕೂಡ ಒಂದಾಗಿದೆ. ಕೊರೋನಾ ಲಸಿಕೆ ನೀಡಲು ಕೂಡ ಇದನ್ನು ಬಳಸಿಕೊಳ್ಳಲಾಗುತ್ತದೆ. ಜನ ಯಾವುದೇ ಆಧಾರ್ ಕೇಂದ್ರಕ್ಕೆ ಹೋಗದೆ ಆನ್ಲೈನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಕೆಲವು ಸೌಲಭ್ಯಗಳಿಗಾಗಿ ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...