![](https://kannadadunia.com/wp-content/uploads/2020/07/gold_rates_5179805_835x547-m.jpg)
ಚಿನ್ನ ಪ್ರಿಯರಿಗೆ ಸಂಕ್ರಾಂತಿ ದಿನ ಖುಷಿ ಸುದ್ದಿ ಸಿಕ್ಕಿದೆ. ಬಂಗಾರದ ಬೆಲೆ ಇಂದು ಇಳಿಕೆ ಕಂಡಿದೆ. ಎಂಸಿಎಕ್ಸ್ ನಲ್ಲಿ ಬಂಗಾರದ ಬೆಲೆಯಲ್ಲಿ ದೊಡ್ಡ ಕುಸಿತ ಕಂಡು ಬಂದಿದೆ. ಬಂಗಾರದ ಬೆಲೆಯಲ್ಲಿ 435 ರೂಪಾಯಿ ಇಳಿಕೆ ಕಂಡು 10 ಗ್ರಾಂ ಚಿನ್ನದ ಬೆಲೆ 48,870 ರೂಪಾಯಿಯಾಗಿದೆ.
ಬೆಳ್ಳಿ ಬೆಲೆಯಲ್ಲೂ ಇಂದು ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ 766 ರೂಪಾಯಿ ಇಳಿಕೆ ಕಂಡು ಕೆ.ಜಿ. ಬೆಳ್ಳಿ ಬೆಲೆ 65,255 ರೂಪಾಯಿಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಅಮೆರಿಕಾದಲ್ಲಿ 9.43 ಡಾಲರ್ ಇಳಿಕೆಯೊಂದಿಗೆ ಬಂಗಾರದ ಬೆಲೆ 1,838.56 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ 0.15 ಡಾಲರ್ ಇಳಿಕೆಯೊಂದಿಗೆ 25.20 ಡಾಲರ್ ಪ್ರತಿ ಔನ್ಸ್ ಆಗಿದೆ.
ಎಂಸಿಎಕ್ಸ್ ನಲ್ಲಿ ಬುಧವಾರ ಬಂಗಾರದ ಬೆಲೆ 234 ರೂಪಾಯಿ ಏರಿಕೆಯೊಂದಿಗೆ 10 ಗ್ರಾಂ ಬಂಗಾರದ ಬೆಲೆ 49,280 ರೂಪಾಯಿಯಾಗಿತ್ತು.