ತಿಂಗಳೊಂದರಲ್ಲೇ 92% ಏರಿಕೆ ಕಂಡ ಬಿಟ್ಕಾಯಿನ್ ಒಂದೇ ವರ್ಷದಲ್ಲಿ 340%ದಷ್ಟು ದುಬಾರಿಯಾಗುವ ಮೂಲಕ ಭಾರೀ ಸದ್ದು ಮಾಡುತ್ತಿದೆ. ಇದೇ ವೇಳೆ ಬಿಟ್ಕಾಯಿನ್ ಅನ್ನೇ ನಂಬಿಕೊಂಡಿರುವ ಹೂಡಿಕೆದಾರರೊಬ್ಬರು ಪಾಸ್ವರ್ಡ್ ಮರೆತ ಕಾರಣದಿಂದ ಬಿಟ್ಕಾಯಿನ್ ಅಕ್ಸೆಸ್ ಮಾಡುವ ಸಾಧ್ಯತೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
$220 ದಶಲಕ್ಷ (1608 ಕೋಟಿ ರೂ.ಗಳು) ಮೌಲ್ಯದ ತಮ್ಮ ಬಿಟ್ಕಾಯಿನ್ ಆಸ್ತಿಯ ಪಾಸವರ್ಡ್ ಅನ್ನು ನೆನಪಿಟ್ಟುಕೊಳ್ಳಲು ಈ ಹೂಡಿಕೆದಾರನಿಗೆ ಕೇವಲ ಎರಡು ಅವಕಾಶಗಳು ಮಾತ್ರವೇ ಇವೆ. ಸ್ಯಾನ್ಫ್ರಾನ್ಸಿಸ್ಕೋ ಮೂಲದ ಸ್ಟೆಫಾನ್ ಥಾಮಸ್ ಹೆಸರಿನ ಜರ್ಮನಿ ಮೂಲದ ಈ ಪ್ರೋಗ್ರಾಮರ್ಗೆ, ಐರನ್ ಕೀ ಹೆಸರಿನ ಚೊಕ್ಕವಾದ ಹಾರ್ಡ್ ಡ್ರೈವ್ ಅಕ್ಸೆಸ್ ಮಾಡಲು ಪಾಸ್ ವರ್ಡ್ನ ಅಗತ್ಯವಿದೆ.
ಈ ಐರನ್ಕೀ ತನ್ನ ಬಳಕೆದಾರರಿಗೆ ಪಾಸವರ್ಡ್ ಅನ್ನು ಗೆಸ್ ಮಾಡಲು ಹತ್ತು ಅವಕಾಶಗಳನ್ನು ಕೊಡಲಿದ್ದು, ವಿಫಲವಾದಲ್ಲಿ ತನ್ನಲ್ಲಿರುವ ಕಂಟೆಂಟ್ ಅನ್ನು ಶಾಶ್ವತವಾಗಿ ಎನ್ಕ್ರಿಪ್ಟ್ ಮಾಡಿಬಿಡುತ್ತದೆ. ಜನರಿಗೆ ತಮ್ಮ ಪಾಸ್ವರ್ಡ್ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಭಾರೀ ನಷ್ಟವಾಗುತ್ತದೆ. ಪುಟ್ಟದೊಂದು ಚೀಟಿಯಲ್ಲಿ ತಮ್ಮ ಪಾಸ್ವರ್ಡ್ ಬರೆದಿಟ್ಟುಕೊಂಡಿದ್ದ ಥಾಮಸ್, ಆ ಚೀಟಿ ಕಾಣದೆ ಹೋದಂತಾಗಿ, ಎಂಟು ಬಾರಿ ಪಾಸ್ವರ್ಡ್ಅನ್ನು ತಪ್ಪಾಗಿ ಎಂಟ್ರಿ ಮಾಡಿದ್ದಾರೆ.