ರಿಲಯನ್ಸ್ ಜಿಯೋ ಗ್ರಾಹಕರಿಗೆ ದಿನಕ್ಕೆ ಎರಡು ಜಿಬಿ ಡೇಟಾದೊಂದಿಗೆ 444 ರೂಪಾಯಿ ರೀಚಾರ್ಜ್ ಯೋಜನೆಯನ್ನು ಆರಂಭಿಸಿದೆ.
ಅನೇಕ ರೀಚಾರ್ಜ್ ಯೋಜನೆಗಳನ್ನು ಜಿಯೋ ಬಿಡುಗಡೆ ಮಾಡಿದ್ದು, ದಿನಕ್ಕೆ ಎರಡು ಜಿಬಿ ಡೇಟಾದೊಂದಿಗೆ 444 ರೂಪಾಯಿ ಪ್ಲಾನ್ ಪರಿಚಯಿಸಲಾಗಿದೆ. 56 ದಿನಗಳ ಮಾನ್ಯತೆ ಹೊಂದಿದ ಯೋಜನೆಯಲ್ಲಿ ದಿನಕ್ಕೆ ಎರಡು ಜಿಬಿ ಡೇಟಾ ನೀಡಲಿದ್ದು 56 ದಿನಗಳಲ್ಲಿ 112 ಜಿಬಿ ಡೇಟಾ ಬಳಕೆದಾರರಿಗೆ ಸಿಗಲಿದೆ. ಡೇಟಾ ಅವಧಿ ಮುಗಿದ ನಂತರ ಬಳಕೆದಾರರು 64 kbps ವೇಗದಲ್ಲಿ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತದೆ. ಜಿಯೋ ಹೊರತುಪಡಿಸಿ ಇತರೆ ನೆಟ್ವರ್ಕ್ ಗಳಿಗೆ ಅನಿಯಮಿತ ಧ್ವನಿ ಕರೆ ಸೌಲಭ್ಯವಿದೆ. ಇದರೊಂದಿಗೆ ಗ್ರಾಹಕರಿಗೆ 100 ಎಸ್ಎಂಎಸ್, ಜಿಯೋ ಅಪ್ಲಿಕೇಶನ್ಗಳು ಪ್ರತಿದಿನ ಉಚಿತವಾಗಿ ಲಭ್ಯವಿರುತ್ತದೆ.
444 ರೂಪಾಯಿ ಯೋಜನೆ ಮಾತ್ರವಲ್ಲದೆ, ಜಿಯೋ 598 ರೂ., 2599 ರೂ., 2399 ರೂ., 599 ರೂ., 249 ರೂ.ಗಳ ಯೋಜನೆಗಳಲ್ಲಿ ಪ್ರತಿ ದಿನ 2 ಜಿಬಿ ಡೇಟಾ ನೀಡಲಿದೆ.
2399 ರೂಪಾಯಿ ರೀಚಾರ್ಜ್ ಯೋಜನೆ ಎಲ್ಲ ನೆಟ್ವರ್ಕ್ ಗಳಿಗೆ 365 ದಿನಗಳ ಸಿಂಧುತ್ವ, ಅನಿಯಮಿತ ಕರೆಗಳು, 100 ಎಸ್ಎಂಎಸ್, 2gb ಡೇಟಾ ಸಿಗಲಿದೆ. 2599 ರೂ. ರೀಚಾರ್ಜ್ ಯೋಜನೆಯಲ್ಲಿ ಇವೆಲ್ಲವುಗಳು ಇದ್ದು, ಹೆಚ್ಚುವರಿಯಾಗಿ 10 ಜಿಬಿ ಡೇಟಾ, ಡಿಸ್ನಿ + ಹಾಟ್ ಸ್ಟಾರ್ ಚಂದಾದಾರಿಕೆ ಒಂದು ವರ್ಷದವರೆಗೆ ನೀಡಲಿದೆ.