ನವದೆಹಲಿ: ಉಕ್ಕು ಸಚಿವಾಲಯ ಅಧೀನದಲ್ಲಿರುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನ ಶೇಕಡ 5 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಮೂಲ ಬೆಲೆ 64 ರೂಪಾಯಿ ದರದಲ್ಲಿ 20.65 ಕೋಟಿ ಷೇರುಗಳನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ. SAIL ಪ್ರತಿ ಷೇರು ಮೂಲಬೆಲೆ 64 ರೂಪಾಯಿ ನಿಗದಿಪಡಿಸಿದ್ದು, ಶುಕ್ರವಾರದಿಂದ ಪ್ರಕ್ರಿಯೆ ಆರಂಭವಾಗಲಿದ್ದು, ಚಿಲ್ಲರೆ ಹೂಡಿಕೆದಾರರಿಗೆ ಅವಕಾಶ ಇರುತ್ತದೆ. ಸರ್ಕಾರ ಸೇಲ್ ನಲ್ಲಿ ಶೇಕಡ 75 ರಷ್ಟು ಪಾಲು ಹೊಂದಿದೆ. ಸೈಲ್ ಉಕ್ಕು ಸಚಿವಾಲಯದ ಅಧೀನದಲ್ಲಿರುವ ಭಾರತದ ಅತಿದೊಡ್ಡ ಉತ್ಪಾದಕ ಸಂಸ್ಥೆಯಾಗಿದೆ.