ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಖಾಸಗಿತನಕ್ಕೆ ಭಂಗ ಮಾಡಬೇಡಿ ಎಂದು ಮನವಿ ಮಾಡಿದ್ದ ಈ ದಂಪತಿ ಇದೀಗ ಮತ್ತೊಮ್ಮೆ ತಮ್ಮ ಮಗಳ ಫೋಟೋವನ್ನ ಕ್ಲಿಕ್ಕಿಸಬೇಡಿ ಎಂದು ಮಾಧ್ಯಮ ಮಿತ್ರರ ಬಳಿ ಮನವಿ ಮಾಡಿದ್ದಾರೆ.
ಮುಂಬೈನ ಸೆಲೆಬ್ರಿಟಿ ಫೋಟೋ ಕ್ಲಿಕ್ಕಿಸುವ ಫೋಟೋಗ್ರಾಫರ್ ಬಳಿ ಮನವಿ ಮಾಡಿರುವ ದಂಪತಿ ದಯಮಾಡಿ ನಮ್ಮ ಮಗಳ ಖಾಸಗಿತನಕ್ಕೆ ಅವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ. ನಮ್ಮ ಮೇಲೆ ನೀವಿಟ್ಟಿರುವ ಪ್ರೀತಿಗೆ ಧನ್ಯವಾದ. ಅದೇ ರೀತಿ ನಮ್ಮ ಖಾಸಗಿತನಕ್ಕೂ ಬೆಲೆ ಕೊಡಿ ಎಂದು ವಿರಾಟ್ ಕೊಹ್ಲಿ ಕೇಳಿದ್ದಾರೆ.
ಪೋಷಕರಾಗಿ ನಿಮ್ಮ ಬಳಿ ಸರಳವಾದ ಮನವಿಯೊಂದನ್ನ ಇಡುತ್ತಿದ್ದೇವೆ. ನಮ್ಮ ಮಗುವಿನ ಖಾಸಗಿತನ ಕಾಪಾಡಲು ನಿಮ್ಮ ಸಹಾಯ ಹಾಗೂ ಬೆಂಬಲದ ಅಗತ್ಯವಿದೆ ಎಂದು ವಿರುಷ್ಕಾ ದಂಪತಿ ಹೇಳಿದ್ದಾರೆ.