alex Certify ಅಚ್ಚರಿಗೊಳಿಸುತ್ತೆ ಮಗು ಕುರಿತ ಪ್ರಶ್ನೆಗೆ ಪ್ರಿಯಾಂಕಾ ಕೊಟ್ಟ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ಮಗು ಕುರಿತ ಪ್ರಶ್ನೆಗೆ ಪ್ರಿಯಾಂಕಾ ಕೊಟ್ಟ ಉತ್ತರ

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ ವಾರ್ತೆ ಕೇಳ್ತಾ ಇದ್ದಂತೆಯೇ ಈ ದಂಪತಿಗೆ ಆಪ್ತರು, ಕುಟುಂಬಸ್ಥರು ಅಭಿಮಾನಿಗಳು ಹೀಗೆ ಸಿಕ್ಕಾಪಟ್ಟೆ ಜನರು ಶುಭಾಶಯ ವಿನಿಮಯ ಮಾಡಿದ್ದಾರೆ. ಇದರಲ್ಲಿ ಬಹುಭಾಷಾ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್​ ಕೂಡ ಒಬ್ಬರು.

ವಿರುಷ್ಕಾ ದಂಪತಿ ಬಳಿಕ ಇದೀಗ ಪ್ರಿಯಾಂಕಾ ಹಾಗೂ ನಿಕ್​ ದಂಪತಿ ಯಾವಾಗ ಈ ಗುಡ್​ ನ್ಯೂಸ್​ ಕೊಡ್ತಾರೆ ಅಂತಾ ಅಭಿಮಾನಿಗಳು ಬೆರಗುಗಣ್ಣಿನಿಂದ ಕಾಯ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಗುವಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಪಿಂಕಿ ಕೊಟ್ಟ ಉತ್ತರ ಕೇಳಿದ್ರೆ ನೀವು ಬೆಕ್ಕಸ ಬೆರಗಾಗೋದು ಗ್ಯಾರಂಟಿ.

ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದ ವೇಳೆ ಅವರಿಗೆ ನಿಮಗೆ ಎಷ್ಟು ಮಗು ಹೊಂದಬೇಕು ಎಂಬ ಆಸೆಯಿದೆ ಎಂದು ಕೇಳಲಾಯ್ತು. ಅದಕ್ಕೆ ಪ್ರಿಯಾಂಕಾ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಮಕ್ಕಳನ್ನ ಹೊಂದಬೇಕು ಅಂತಾ ನನಗೆ ಆಸೆ ಇದೆ. ಬಹುಶಃ ಒಂದು ಕ್ರಿಕೆಟ್​ ಟೀಂಗೆ ಆಗುವಷ್ಟು..? ನನಗದು ಗ್ಯಾರಂಟಿ ಇಲ್ಲ ಎಂದು ಹೇಳಿ ನಕ್ಕಿದ್ದಾರೆ.

ಪ್ರಿಯಾಂಕಾ ಹಾಗೂ ನಿಕ್​ ಜೋನಾಸ್​ ದಂಪತಿ ಜೋಧಪುರದ ಮೆಜೆಸ್ಟಿಕ್​ ಉಮೈದ್​ ಭವನ್​ ಪ್ಯಾಲೇಸ್​ನಲ್ಲಿ ಡಿಸೆಂಬರ್​ 2, 2018ರಂದು ವಿವಾಹವಾದರು. ಇವರ ಮದುವೆ ಸಮಾರಂಭ ಬಹಳ ದಿನಗಳವರೆಗೆ ನಡೆದಿತ್ತು. ಹಿಂದೂ ಹಾಗೂ ಕ್ರಿಶ್ಚಿಯನ್​ ಎರಡೂ ವಿಧದಲ್ಲೂ ಈ ಜೋಡಿ ಮದುವೆಯಾಗಿತ್ತು.

https://www.instagram.com/p/CJ4KEPmDvoM/?utm_source=ig_web_copy_link

https://www.instagram.com/p/CJ4J6NLDcKp/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...