ಕಳೆದ ವರ್ಷದ ಜುಲೈನಲ್ಲಿ ಹೆಣ್ಣು ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿದ್ದ 40 ವರ್ಷದ ವ್ಯಕ್ತಿಗೆ ಥಾಣೆ ಕೋರ್ಟ್ 6 ತಿಂಗಳ ಜೈಲು ಶಿಕ್ಷೆ ಹಾಗೂ 1000 ರೂಪಾಯಿ ದಂಡ ವಿಧಿಸಿದೆ. ಈ ಅಮಾನವೀಯ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದ್ದು. ಈ ಸಂಬಂಧ ತೀರ್ಪು ಪ್ರಕಟಿಸಿದ ಥಾಣೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆರೋಪಿಗೆ ಶಿಕ್ಷೆ ವಿಧಿಸಿದೆ.
ಆರೋಪಿಯನ್ನ ವಾಗ್ಲೆ ಎಸ್ಟೇಟ್ನ ವಿಜಯ್ ಚಲ್ಕೆ ಎಂದು ಗುರುತಿಸಲಾಗಿದೆ. ಈತ ಡ್ರಗ್ ವ್ಯಸನಿ ಕೂಡ ಆಗಿದ್ದ ಎನ್ನಲಾಗಿದೆ. ಈತನ ವಿರುದ್ಧ ಐಪಿಸಿ ಸೆಕ್ಷನ್ 377 (ಅನೈಸರ್ಗಿಕ ಲೈಂಗಿಕ ಕ್ರಿಯೆ ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಕೆಲ ಸ್ಥಳೀಯ ನಿವಾಸಿಗಳು ಈತ ಶ್ವಾನದ ಮೇಲೆ ಅತ್ಯಾಚಾರ ನಡೆಸೋದನ್ನ ಕಂಡ ಬಳಿಕ ಪ್ರಾಣಿಗಳ ರಕ್ಷಣಾ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಬಳಿಕ ಇದರ ಬಗ್ಗೆ ಪ್ರಾಣಿ ಪ್ರಿಯರು ಶ್ರೀನಗರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.