ಕಳೆದ 26 ವರ್ಷಗಳಿಂದ ಬಾಕಿ ಇರುವ ನಿಜಾಮ ಜ್ಯುವೆಲ್ಲರಿ ಟ್ರಸ್ಟ್ನ ಆದಾಯ ಹಾಗೂ ಸಂಪತ್ತು ತೆರಿಗೆ ಸಮಸ್ಯೆಯನ್ನ ಬಗೆಹರಿಸುವಂತೆ ಹೈದರಾಬಾದ್ನ ನಿಜಾಮ ಕುಟುಂಬದ ಸದಸ್ಯರಾದ ಮಿರ್ ಒಸ್ಮಾನ್ ಅಲಿ ಖಾನ್ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ನಿಜಾಮ ರಾಜವಂಶಸ್ಥ ನಜಾಫ್ ಅಲಿ ಖಾನ್, ನಿಜಾಮ್ಸ್ ಜ್ಯುವೆಲ್ಲರಿ ಟ್ರಸ್ಟ್ ಹಾಗೂ ಸಂಪತ್ತು ತೆರಿಗೆಯನ್ನ ಬಗೆಹರಿಸದೇ 26 ವರ್ಷಗಳೇ ಕಳೆದಿದೆ ಎಂದು ಹೇಳಿದ್ರು. ಈ ಅವಧಿಯಲ್ಲಿ ನಿಜಾಮ ಕುಟುಂಬದ 114 ಫಲಾನುಭವಿಗಳ ಪೈಕಿ 39 ಮಂದಿ ಅಸುನೀಗಿದ್ದು ಉಳಿದವರು ತೀವ್ರ ಆರೋಗ್ಯ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ರು.
1950ರ ದಶಕದಲ್ಲಿ ಹೈದರಾಬಾದ್ನ್ನು ಯೂನಿಯನ್ ಆಫ್ ಇಂಡಿಯಾಗೆ ಸೇರಿಸಿದ ನಂತರ ವಿವಿಧ ನಿಜಾಮ ಟ್ರಸ್ಟ್ಗಳನ್ನ ರಚನೆ ಮಾಡಲಾಗಿತ್ತು. ಇವುಗಳಲ್ಲಿ ಒಂದು ನಿಜಾಮ ಜ್ಯುವೆಲ್ಲರಿ ಟ್ರಸ್ಟ್. ರಾಜಕುಮಾರ ಮುಫಾಖಾಮ್ ಜಾ ಮತ್ತು ಹಣಕಾಸು ಸಚಿವಾಲಯದಿಂದ ಸರ್ಕಾರಿ ನಾಮನಿರ್ದೇಶಿತ ಅಧಿಕಾರಿಯನ್ನು ಒಳಗೊಂಡ ಟ್ರಸ್ಟಿಗಳಿಗೆ ಆಭರಣಗಳನ್ನು ಮಾರಾಟ ಮಾಡಲು ಅಧಿಕಾರ ನೀಡಲಾಯಿತು.
ಸುಪ್ರೀಂ ಕೋರ್ಟ್ನ ಹಸ್ತಕ್ಷೇಪದ ನಂತರ 1995 ರಲ್ಲಿ ಭಾರತ ಸರ್ಕಾರ 206 ಕೋಟಿ ರೂ.ಗೆ ಆಭರಣ ಖರೀದಿಸಲು ಒಪ್ಪಿಕೊಂಡಿತು ಎಂದು ಖಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಟ್ರಸ್ಟಿಗಳು ಆಭರಣವನ್ನು ಹಸ್ತಾಂತರಿಸುವ ಸಮಯದಲ್ಲಿ, ಆದಾಯ ತೆರಿಗೆ ಇಲಾಖೆ ಆದಾಯ ತೆರಿಗೆ ಮತ್ತು ಸಂಪತ್ತಿನ ತೆರಿಗೆ ಬಾಕಿಗೆ ಒಟ್ಟು 30.50 ಕೋಟಿ ರೂ. ಪಾವತಿಗೆ ಸೂಚನೆ ನೀಡಿದೆ.