alex Certify ರೈತರಿಗೆ ನೆರವಾಗ್ತಿದೆ ಸರ್ಕಾರದ ಈ ಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ನೆರವಾಗ್ತಿದೆ ಸರ್ಕಾರದ ಈ ಯೋಜನೆ

ರೈತರಿಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಕೂಡ ಒಂದು. ಸರ್ಕಾರಿ ನೌಕರರಿಗೆ ಸಿಗುವಂತೆ ರೈತರಿಗೆ ಪ್ರತಿ ತಿಂಗಳು ಈ ಯೋಜನೆಯಡಿ ಪಿಂಚಣಿ ಸಿಗುತ್ತದೆ.

ಕಿಸಾನ್ ಮಾನ್ ಧನ್ ಯೋಜನೆಯಡಿ 60 ವರ್ಷ ನಂತ್ರ ಪಿಂಚಣಿ ಸೌಲಭ್ಯ ಸಿಗಲಿದೆ. 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆ ಲಾಭ ಪಡೆಯಬಹುದು. ಇದನ್ನು ಎಲ್ಐಸಿ ನಿರ್ವಹಿಸುತ್ತದೆ.

ವಯಸ್ಸಿನ ಆಧಾರದ ಮೇಲೆ ರೈತರಿಗೆ ಪಿಂಚಣಿ ಸಿಗುತ್ತದೆ. ಈ ಯೋಜನೆ ಪಡೆದ ರೈತರಿಗೆ 60 ವರ್ಷದ ನಂತ್ರ ಮಾಸಿಕ 3000 ರೂಪಾಯಿ ಅಥವಾ ವಾರ್ಷಿಕ 36000 ರೂಪಾಯಿ ಸಿಗುತ್ತದೆ. ಈವರೆಗೆ 21 ಲಕ್ಷಕ್ಕೂ ಹೆಚ್ಚು ರೈತರು ಈ ಯೋಜನೆಗೆ ಹೆಸರು ನೋಂದಾಯಿಸಿದ್ದಾರೆ. ಇದ್ರ ಲಾಭವನ್ನು ಯಾವುದೇ ರೈತರು ಪಡೆಯಬಹುದು.

2 ಹೆಕ್ಟೇರ್ ಭೂಮಿ ಹೊಂದಿದ ರೈತ ಇದ್ರಲ್ಲಿ ಹೆಸರು ನೋಂದಾಯಿಸಬಹುದು. ರೈತ ಪ್ರತಿ ತಿಂಗಳು 55 ರೂಪಾಯಿಯಿಂದ 200 ರೂಪಾಯಿವರೆಗೆ ಠೇವಣಿ ಇಡಬೇಕಾಗುತ್ತದೆ. ಈ ಯೋಜನೆಯಲ್ಲಿ ಸರ್ಕಾರ ನೀಡುವ ಕೊಡುಗೆ ಕೂಡ ಸಮನಾಗಿರುತ್ತದೆ. ಅಂದ್ರೆ 55 ರೂಪಾಯಿ ರೈತ ಪಾವತಿ ಮಾಡಿದಲ್ಲಿ ಸರ್ಕಾರ ಕೂಡ 55 ರೂಪಾಯಿ ಪಾವತಿಸುತ್ತದೆ. ಸಾಮಾನ್ಯ ಸೇವಾ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...