ಜಾಲತಾಣವು ಮುದ್ದಾದ ಪ್ರಾಣಿಗಳ ಚಿಣ್ಣಾಟದ ಖನಿ. ಅಂತಹುದೇ ಮುದ್ದಾದ ವಿಡಿಯೋವೊಂದು ವೈರಲ್ ಆಗಿದ್ದು, 14 ಸೆಕೆಂಡಿನ ಈ ವಿಡಿಯೋವನ್ನು ಬರೋಬ್ಬರಿ 2.2 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ.
ಹೊಂಬಣ್ಣದ ಮೇಲ್ಮೈ ಹೊಂದಿದ ನಾಯಿ ಪಬ್ಲೋ ಹಾಗೂ ಬೀಡಾಡಿ ದನವೊಂದು 6 ತಿಂಗಳ ಬಳಿಕ ಮುಖಾಮುಖಿಯಾಗಿದ್ದು, ಹಲವು ದಿನಗಳ ನಂತರ ಭೇಟಿಯಾದ ಹಳೆಯ ಗೆಳೆಯರು ಮುದ್ದಾಡುವ ವಿಡಿಯೋವು ಬ್ಲೈನ್ ಏಡ್ ಮೇ ಖಾತೆಯಿಂದ ಶೇರ್ ಆಗಿದೆ.
ಆರು ತಿಂಗಳ ಹಿಂದೆ ವಾಯುವಿಹಾರಕ್ಕೆ ಹೋಗುವ ದಾರಿ ಮಧ್ಯೆ ಸಂಧಿಸಿದ್ದ ಪಬ್ಲೋ ಹಾಗೂ ಹಸು ಮತ್ತೆ ಸಿಕ್ಕಿರಲಿಲ್ಲ. ಏಕಾಏಕಿ ಈ ಪ್ರದೇಶದಲ್ಲಿ ಹಸು ಕಾಣಿಸಿಕೊಂಡಿದ್ದು, ಇದನ್ನು ಕಂಡ ಪಬ್ಲೋ ಕಾಂಪೌಂಡ್ ಗೋಡೆ ಹಾರಿ ಆಕಳ ಮುಖ ನೆಕ್ಕಿ ಮುದ್ದಾಡಿತು. ಹಸುವೂ ಪಬ್ಲೋವನ್ನು ಅಷ್ಟೇ ಆತ್ಮೀಯವಾಗಿ ಮುದ್ದಾಡಿದ್ದು ಖುಷಿ ಪಟ್ಟಿತು.
https://youtu.be/f-1172-4TsM