ನವದೆಹಲಿ: ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ನಲ್ಲಿ ಗೃಹಸಾಲಕ್ಕೆ ತೆರಿಗೆ ಕಡಿತ ಹೆಚ್ಚಳ ಮಾಡಬೇಕೆಂದು 20 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಕ್ರೆಡಾಯ್ ಸಲಹೆ ನೀಡಿದೆ.
80 ಸಿ ಸೆಕ್ಷನ್ ಅಡಿಯಲ್ಲಿ ಗೃಹ ಸಾಲದ ಮರುಪಾವತಿಯ ಮೇಲೆ ತೆರಿಗೆ ಕಡಿತದ ಪ್ರಯೋಜನ ಪಡೆಯಲು 1.5 ಲಕ್ಷ ರೂ.ಗಳ ಮಿತಿ ಇದೆ. ಕೇಂದ್ರ ಬಜೆಟ್ ನಲ್ಲಿ ಗೃಹ ಸಾಲದ ಮರುಪಾವತಿಯ ಮೇಲೆ ಆದಾಯ ತೆರಿಗೆ ಕಡಿತದ ಮಿತಿ ಹೆಚ್ಚಳ ಮಾಡಬೇಕೆಂದು ಸಲಹೆ ನೀಡಲಾಗಿದೆ.
ಈ ಬೆಳವಣಿಗೆಯಿಂದ ವಸತಿ ನಿರ್ಮಾಣಕ್ಕೆ ಉತ್ತೇಜನ ಸಿಗುತ್ತದೆ. ಜೊತೆಗೆ ಜನತೆಗೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮ ಒತ್ತಡದಲ್ಲಿ ಇರುವುದರಿಂದ ಗೃಹ ಸಾಲಕ್ಕೆ ತೆರಿಗೆ ಕಡಿತದ ಮಿತಿ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ.