ವಾಟ್ಸಾಪ್ ಪ್ರೈವೇಸಿ ನೀತಿ ಕುರಿತಾದ ಗೊಂದಲಗಳಿಗೆ ಬೇಸತ್ತ ಬಳಕೆದಾರರು ಸಿಗ್ನಲ್ ಆಪ್ ಮೊರೆಹೋಗಿದ್ದಾರೆ. ಭಾರತದಲ್ಲಿ ಸಿಗ್ನಲ್ ಆಪ್ ಡೌನ್ಲೋಡ್ ಸಂಖ್ಯೆ ಭಾರೀ ಏರಿಕೆ ಕಂಡಿದೆ.
ಜನವರಿ 6 ರಿಂದ 10 ರವರೆಗೆ 23 ಲಕ್ಷ ಜನ ಸಿಗ್ನಲ್ ಆಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. 15 ಲಕ್ಷ ಮಂದಿ ಟೆಲಿಗ್ರಾಮ್ ಆಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ಹೊಸ ನೀತಿ ಜಾರಿಗೊಳಿಸಲು ಮುಂದಾಗಿದ್ದ ವಾಟ್ಸಾಪ್ ಗೆ ಭಾರಿ ಹಿನ್ನಡೆಯಾಗಿದೆ.
ಈ ಬೆಳವಣಿಗೆಯಿಂದ ಕಂಗಾಲಾಗಿರುವ ಜನಪ್ರಿಯ ಜಾಲತಾಣ ವಾಟ್ಸಾಪ್ ಸ್ಪಷ್ಟನೆ ನೀಡಿದೆ. ಬಳಕೆದಾರರ ಮಾಹಿತಿಯನ್ನು ಮತ್ತು ಕಾಂಟ್ಯಾಕ್ಟ್ ಗಳನ್ನು ಫೇಸ್ಬುಕ್ ಜೊತೆಗೆ ಹಂಚಿಕೊಳ್ಳುವುದಿಲ್ಲ. ಸಂದೇಶಗಳು ಖಾಸಗಿಯಾಗಿಯೇ ಉಳಿದುಕೊಳ್ಳಲಿವೆ ಎಂದು ತಿಳಿಸಿದೆ. ಆದರೆ, ವಾಟ್ಸಾಪ್ ಕಿರಿಕ್ ನಿಂದ ಬೇಸತ್ತ ಬಳಕೆದಾರರು ಸಿಗ್ನಲ್ ಮತ್ತು ಟೆಲಿಗ್ರಾಂ ಆಪ್ ಬಳಕೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.