ನವದೆಹಲಿ: ಹೈದರಾಬಾದ್ ನ ಭಾರತ್ ಬಯೋಟೆಕ್ ನಿಂದ 16.5 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು. ಉಳಿದವುಗಳನ್ನು ಪ್ರತಿ ಬಾಟಲಿಗೆ ತೆರಿಗೆ ಸೇರಿ 295 ರೂಪಾಯಿ ದರದಲ್ಲಿ ಪೂರೈಕೆ ಮಾಡಲಾಗುವುದು.
ಅಂದ ಹಾಗೆ, ಭಾರತ್ ಬಯೋಟೆಕ್ ನಿಂದ 55 ಲಕ್ಷ ಡೋಸ್ ಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದರಲ್ಲಿ 16.5 ಲಕ್ಷ ಡೋಸ್ ಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಪುಣೆಯ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ 1.10 ಕೋಟಿ ಕೊವಿಶೀಲ್ಡ್ ಕೊರೋನಾ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದಾದ ಒಂದು ದಿನದ ನಂತರ ಭಾರತ್ ಬಯೋಟೆಕ್ ನೊಂದಿಗಿನ ಒಪ್ಪಂದದ ಮಾಹಿತಿ ಹೊರ ಬಿದ್ದಿದೆ. ಎಲ್ಲಾ ಲಸಿಕೆಗಳನ್ನು ಜನವರಿ 14ರ ಒಳಗೆ ಪೂರೈಕೆ ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶವ್ಯಾಪಿ ವ್ಯಾಕ್ಸಿನೇಷನ್ ಗೆ ಚಾಲನೆ ನೀಡುವ ಎರಡು ದಿನಗಳ ಮೊದಲು ಎಲ್ಲಾ ಲಸಿಕೆಗಳನ್ನು ನಿಗದಿತ ಸ್ಥಳಗಳಿಗೆ ರವಾನೆ ಮಾಡಲಾಗುತ್ತದೆ. ಮಂಗಳವಾರ ಸಂಜೆ 4 ಗಂಟೆಯವರೆಗೆ ರಾಜ್ಯಮಟ್ಟದ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ 54 ಲಕ್ಷ ಡೋಸ್ ಲಸಿಕೆ ಸ್ವೀಕರಿಸಲಾಗಿದೆ.