ಅಪರೂಪದ ಪ್ರಕರಣವೊಂದರಲ್ಲಿ ಮಹಿಳಾ ಡಾನ್ ಗೀತಾ ತಿವಾರಿಯ ಅಪರಾಧಗಳ ಇತಿಹಾಸದ ಪುಟವನ್ನ ಗೋರಖ್ಪುರ ಪೊಲೀಸರು ತೆರೆದಿದ್ದಾರೆ.
ಕೊಲೆ ಯತ್ನ ಪ್ರಕರಣದಲ್ಲಿ ನವೆಂಬರ್ನಲ್ಲಿ ಡಿಯೋರಿಯಾ ಜೈಲಿನಲ್ಲಿ ತಿವಾರಿಯ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದರೋಡೆ ಹಾಗೂ ಲೂಟಿ ಸೇರಿದಂತೆ ಒಟ್ಟು 8 ಪ್ರಕರಣಗಳಲ್ಲಿ ಆಕೆಯ ಹೆಸರನ್ನ ಸೇರಿಸಲಾಗಿದೆ.
ಇತರೆ ಮಹಿಳಾ ಕೈದಿಗಳೊಂದಿಗೆ ಗಲಾಟೆ ಹಿನ್ನೆಲೆ ಆಕೆಯನ್ನ ಗೋರಖ್ಪುರ ಜೈಲಿನಿಂದ ಸ್ಥಳಾಂತರಿಸಲಾಯಿತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ತಿವಾರಿಪುರ ಠಾಣೆಯಲ್ಲಿ ಆಕೆಯ ಅಪರಾಧದ ಇತಿಹಾಸಗಳನ್ನ ಮತ್ತೊಮ್ಮೆ ತೆರೆಯಲಾಗಿದೆ. ಕಳೆದ ವರ್ಷ ಈಕೆ ತನ್ನ ಸಂಬಂಧಿಯ ಹುಟ್ಟುಹಬ್ಬದಲ್ಲಿ ಇಬ್ಬರು ಯುವಕರನ್ನ ಕೊಲೆ ಮಾಡಿದ್ದಾಳೆ.
ತಿವಾರಿ 2009ರಲ್ಲಿ ಶಿವಕುಮಾರ್ ತಿವಾರಿ ಎಂಬ ಸಾಮಾಜಿಕ ಕಾರ್ಯಕರ್ತನನ್ನ ಮದುವೆ ಆಗುವವರೆಗೂ ಆಶ್ರಯ ಮನೆಯಲ್ಲಿ ವಾಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ಬಳಿಕ ಆಕೆ ಆರ್ಕೆಸ್ಟ್ರಾ ನಡೆಸುತ್ತಿದ್ದಳು. ಹಾಗೂ ಈಕೆ ಶಿವಕುಮಾರ್ ಜೊತೆ ಕೊಟ್ವಾಲಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಳು ಎನ್ನಲಾಗಿದೆ. ಈ ದಂಪತಿ ಮಾದಕ ವಸ್ತು ಸೇವನೆ ಆರಂಭಿಸಿದ್ದರು. ಸುಮಾರು 10 ವರ್ಷದಿಂದ ಈಕೆ ಮನೆ ಮೇಲೆ ನಡೆಸಿದ ದಾಳಿಯಲ್ಲಿ ಐವರನ್ನ ಬಂಧಿಸಲಾಗಿತ್ತು. ತಿವಾರಿ ಜೈಲು ಪಾಲಾಗಿದ್ದು ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ.
2016ರಲ್ಲಿ ಶಿವಕುಮಾರ್ ಸಾವಿನ ಬಳಿಕ ಈಕೆಯ ಎಲ್ಲಾ ವ್ಯವಹಾರಗಳನ್ನ ನೋಡಿಕೊಳ್ಳುತ್ತಿದ್ದಳು. ಕಳ್ಳತನದ ಪ್ರಕರಣದಲ್ಲಿ ಆಕೆ ಜೈಲಿಗೆ ಹೋಗಿದ್ದಳು. ಇದೀಗ ಈಕೆ ವಿರುದ್ಧ ಗೂಂಡಾ ಕಾಯ್ದೆ ಜಾರಿಯಾಗಿದೆ.