ನವದೆಹಲಿ: ಮಹಾಮಾರಿ ಕೊರೊನಾ ಸೋಂಕಿಗೆ ಬ್ರಹ್ಮಾಸ್ತ್ರ ಸಿದ್ಧವಾಗಿದ್ದು, ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ದೇಶದ ವಿವಿಧ ರಾಜ್ಯಗಳಿಗೆ ಕೋವಿಶೀಲ್ಡ್ ಲಸಿಕೆ ಪೂರೈಕೆ ಆರಂಭಸಿದೆ.
ದೇಶದ ಜನತೆಗೆ ಜನವರಿ 16ರಿಂದ ಕೋವಿಶೀಲ್ಡ್ ಲಸಿಕೆ ಪೂರೈಕೆ ಮಾಡಲಾಗುತ್ತಿದ್ದು, ಕೋವಿಶೀಲ್ಡ್ ಲಸಿಕೆ ತುಂಬಿರುವ ಮೂರು ಟ್ರಕ್ ಗಳಲ್ಲಿ ಪೊಲೀಸ್ ಭದ್ರತೆಯಲ್ಲಿ ಎಸ್ ಐ ಐ ನಿಂದ ಪುಣೆ ಏರ್ ಪೋರ್ಟ್ ಮೂಲಕ ದೇಶದ 13 ಸ್ಥಳಗಳಿಗೆ ಲಸಿಕೆ ರವಾನೆಯಾಗುತ್ತಿದೆ.
ಒಟ್ಟು 8 ವಿಮಾನಗಳ ಮೂಲಕ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ 13 ನಗರಗಳಿಗೆ ಕೋವಿಶೀಲ್ಡ್ ಲಸಿಕೆ ಸಾಗಿಸಲಾಗುತ್ತಿದೆ. ಕೆಲವೇ ಹೊತ್ತಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋವಿಶೀಲ್ಡ್ ಲಸಿಕೆ ಬಂದು ತಲುಪಲಿದೆ.