ನಾಯಿ ಸಾಕುವವರು ಇನ್ನು ಮುಂದೆ ಜವಾಬ್ದಾರಿಯಿಂದ ವರ್ತಿಸಬೇಕು. ಎಲ್ಲೆಂದರಲ್ಲಿ ಅವುಗಳು ಮಲ-ಮೂತ್ರ ವಿಸರ್ಜನೆ ಮಾಡಿದರೆ, ಮಾಲೀಕರಿಗೆ ಬೀಳಲಿದೆ ದುಪ್ಪಟ್ಟು ದಂಡ.
ವಾಯು ವಿಹಾರಕ್ಕೆಂದು ಸಾಕಿದ ನಾಯಿಯನ್ನೂ ಕರೆತರುವ ದಿಲ್ಲಿಯ ಕೆಲ ಒಡ್ಡು ಜನಗಳು, ರಸ್ತೆ, ಪಾದಚಾರಿ ಮಾರ್ಗ, ಉದ್ಯಾನವನಗಳಲ್ಲಿ ಅವು ಗಲೀಜು ಮಾಡಿದರೂ ಸುಮ್ಮನೆ ಹೋಗುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಬಿಗಿ ನಿಯಮ ಜಾರಿಗೊಳಿಸಲು ಮುಂದಾಗಿದೆ.
ದಿಲ್ಲಿ ಮಾತ್ರವಲ್ಲದೆ, ಮುಂಬೈನಂತಹ ಮಹಾನಗರಿಯಲ್ಲೂ ಸಮಸ್ಯೆ ಇದೆ. ಹೀಗಾಗಿ ದಂಡದ ಮೊತ್ತವನ್ನು ಹೆಚ್ಚಳ ಮಾಡಲಾಗುತ್ತಿದೆ. 2018 ರ ಘನತ್ಯಾಜ್ಯ ನಿರ್ವಹಣಾ ನಿಯಮಾವಳಿ ಸೆಕ್ಷನ್ 13(1) ರ ಪ್ರಕಾರ ಸಾಕುಪ್ರಾಣಿಗಳೂ ಸಾರ್ವಜನಿಕ ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜಿಸುವಂತಿಲ್ಲ. ಹಾಗೊಂದು ವೇಳೆ ಮಾಡಿದರೆ, ಅದರ ಮಾಲೀಕರೇ ಹೊಣೆ.