ನವದೆಹಲಿ: ಕೊರೋನಾ ಕಾರಣದಿಂದ ಈ ಬಾರಿ ಕಾಗದ ರಹಿತ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ನಿರ್ಧಾರಿಸಿದೆ.
ಬಜೆಟ್ ಪ್ರತಿಗಳನ್ನು ಮುದ್ರಿಸದೆ, ವಿದ್ಯುನ್ಮಾನವಾಗಿ ಸಾಫ್ಟ್ ಕಾಪಿ ನೀಡಲಾಗುತ್ತದೆ. ಇದೇ ವೇಳೆ ಕೇಂದ್ರ ಸರ್ಕಾರ ಆರ್ಥಿಕತೆಗೆ ಉತ್ತೇಜನ ನೀಡಲು ಮತ್ತು ಆದಾಯ ಸಂಗ್ರಹ ಉದ್ದೇಶದಿಂದ ಕೋವಿಡ್ ಸೆಸ್ ಸಂಗ್ರಹಿಸುವ ಬಗ್ಗೆ ಚಿಂತನೆ ನಡೆಸಿದೆ.
ಕೇಂದ್ರ ಹಣಕಾಸು ಸಚಿವಾಲಯದ ಬಜೆಟ್ ಪೂರ್ವಭಾವಿ ಪರಿಶೀಲನೆ ಸಭೆಯಲ್ಲಿ ಶೇಕಡ ಎರಡರಷ್ಟು ಕೋವಿಡ್ ಸೆಸ್ ಸಂಗ್ರಹಿಸುವ ಕುರಿತು ಚರ್ಚೆ ನಡೆದಿದೆ. 10 ಲಕ್ಷಕ್ಕೂ ಮೀರಿದ ಆದಾಯಕ್ಕೆ ಸೆಸ್ ಹಾಕುವ ಸಾಧ್ಯತೆ ಇದೆ. ಶೇಕಡ 20 ರಷ್ಟು ಸಂಗ್ರಹಕ್ಕೆ ಪ್ರಸ್ತಾಪವಿದ್ದು, ಹೆಚ್ಚುವರಿಯಾಗಿ 50 ಸಾವಿರ ಕೋಟಿ ರೂಪಾಯಿ ಆದಾಯ ಸಂಗ್ರಹದ ನಿರೀಕ್ಷೆ ಹೊಂದಲಾಗಿದೆ.
ಕೋವಿಡ್ ಸೆಸ್ ಸಂಗ್ರಹಿಸುವ ಕುರಿತಾಗಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಹಣಕಾಸು ಸಚಿವಾಲಯದ ಸಭೆಯಲ್ಲಿ ಚರ್ಚೆ ನಡೆದಿದೆ. ಸೆಸ್ ನಿಂದ ಸಂಗ್ರಹವಾಗುವ ಹಣವನ್ನು ಸಾಂಕ್ರಾಮಿಕ ರೋಗಗಳಿಂದ ಎದುರಾಗಿರುವ ಹೆಚ್ಚುವರಿ ವೆಚ್ಚ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ. ಕೊರೋನಾ ಲಸಿಕೆಯ ವೆಚ್ಚವನ್ನು ಇದರಿಂದಲೇ ಭರಿಸುವ ಲೆಕ್ಕಾಚಾರ ಇದೆ. ಅಲ್ಲದೇ, ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ವೃದ್ಧಿಗೆ ಸೆಸ್ ಸಂಗ್ರಹಿಸುವ ಚಿಂತನೆ ನಡೆದಿದೆ. ತಂಬಾಕು, ಸಿಗರೇಟ್ ಉತ್ಪನ್ನಗಳ ಮೇಲೆ ಇಂತಹ ಸೆಸ್ ವಿದಿಸಬೇಕೆಂದು ಕೆಲ ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.