ʼನಿಶ್ಚಿತ ಠೇವಣಿʼ ಹಿಂಪಡೆಯುವ ಕುರಿತು ಮಹತ್ವದ ತೀರ್ಮಾನ ಕೈಗೊಂಡಿದೆ ಈ ಬ್ಯಾಂಕ್ 11-01-2021 3:58PM IST / No Comments / Posted In: Business, Latest News ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ ಸೋಮವಾರ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನ ನೀಡಿದೆ. ಅವಧಿಗೂ ಮುನ್ನವೇ ಡೆಪಾಸಿಟ್ ಸ್ಕೀಮ್( ಎಫ್ಡಿ) ನಿಂದ ತೆಗೆಯಲಾಗುವ ಹಣಕ್ಕೆ ಯಾವುದೇ ದಂಡ ವಿಧಿಸಲಾಗೋದಿಲ್ಲ ಎಂದು ಹೇಳಿದೆ. ಕಳೆದ ವರ್ಷದ ಡಿಸೆಂಬರ್ 15ಹಾಗೂ ಅದಕ್ಕೂ ನಂತರಕ್ಕೆ ಕಾಯ್ದಿರಿಸಿದ ಎಲ್ಲಾ ಠೇವಣಿಗಳಿಗೆ ಇದು ಅನ್ವಯವಾಗಲಿದೆ ಅಂತಾ ಬ್ಯಾಂಕ್ ಹೇಳಿದೆ. ಹೊಸ ನಿಯಮವು ಬ್ಯಾಂಕ್ನ ಆರ್ಡಿ ಹಾಗೂ ಎಫ್ಡಿ ಎರಡಕ್ಕೂ ಅನ್ವಯವಾಗಲಿದೆ. 2 ವರ್ಷಕ್ಕೂ ಅಧಿಕ ಅವಧಿಗೆ ಬುಕ್ಕಿಂಗ್ ಮಾಡಲಾದ ಆರ್ಡಿ ಹಾಗೂ ಎಫ್ಡಿಗಳಿಗೆ ಈ ಗ್ರಾಹಕ ಸ್ನೇಹಿ ನಿಯಮ ಅನ್ವಯವಾಗಲಿದೆ. ಗ್ರಾಹಕರು ಯಾವುದೇ ಶುಲ್ಕದ ಚಿಂತೆಯಿಲ್ಲದೇ ದೀರ್ಘಾವದಿ ಉಳಿತಾಯವನ್ನ ಮಾಡಲು ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಈ ಗ್ರಾಹಕ ಸ್ನೇಹಿ ನಿಯಮವನ್ನ ತಂದಿದ್ದೇವೆ. ಈ ಮೂಲಕ ಗ್ರಾಹಕರು ನಮ್ಮ ಬ್ಯಾಂಕ್ನಲ್ಲಿ ನಿಶ್ಚಿತ ಠೇವಣಿಗಳನ್ನ ಕಾಯ್ದಿರಿಸಬಹುದಾಗಿದೆ ಎಂದು ಆಕ್ಸಿಸ್ ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. 2 ವರ್ಷಕ್ಕಿಂತ ಹೆಚ್ಚಿನ ಅವಧಿಯ ಕಾಯ್ದಿರಿಸಿದ ಹೊಸ ಅವಧಿಯ ಠೇವಣಿಗಳಿಗೆ 15 ತಿಂಗಳ ಡೆಪಾಸಿಟ್ ಬಳಿಕ ಸಂಪೂರ್ಣ ಠೇವಣಿಯನ್ನ ಗ್ರಾಹಕ ವಾಪಸ್ ಪಡೆದರೆ ಅಕಾಲಿಕ ದಂಡ ವಿಧಿಸಲಾಗುತ್ತೆ. ಆದರೆ ಹೊಸ ನಿಯಮದ ಪ್ರಕಾರ ಪ್ರಧಾನ ಮೌಲ್ಯದ 25 ಪ್ರತಿಶತದವರೆಗೆ ಯಾವುದೇ ದಂಡ ವಿಧಿಕೆಯಾಗಲ್ಲ ಎಂದು ಬ್ಯಾಂಕ್ ಹೇಳಿದೆ. ಆಕ್ಸಿಸ್ ಬ್ಯಾಂಕ್ನ ಇವಿಪಿ – ರಿಟೇಲ್ ಲಿಯಾಬಿಲಿಟಿ & ಡೈರೆಕ್ಟ್ ಬ್ಯಾಂಕಿಂಗ್ ಪ್ರಾಡಕ್ಟರ್ಸ್ ಪ್ರವೀಣ್ ಭಟ್ ಈ ವಿಚಾರವಾಗಿ ಮಾತನಾಡಿ, ಆಕ್ಸಿಸ್ ಬ್ಯಾಂಕ್ನ ಗ್ರಾಹಕರ ಅವಶ್ಯಕತೆಗಳನ್ನ ಗಮನದಲ್ಲಿಟ್ಟುಕೊಂಡು ಹೊಸ ನಿಯಮ ಹಾಗೂ ಆಫರ್ಗಳನ್ನು ಜಾರಿಗೆ ತರುತ್ತಲೇ ಇದ್ದೇವೆ. ಇದೀಗ 15 ತಿಂಗಳ ಬಳಿಕ ಬಂದ್ ಮಾಡಲಾದ ಎಲ್ಲಾ ಎಫ್ಡಿಗಳ ದಂಡದ ಮೊತ್ತವನ್ನ ಮನ್ನಾ ಮಾಡಿದ್ದೇವೆ ಎಂದು ಹೇಳಿದ್ರು. ಆಕ್ಸಿಸ್ ಬ್ಯಾಂಕ್ ಭಾರತದ ಮೂರನೇ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿದೆ.