alex Certify ರಾಜಸ್ಥಾನದಲ್ಲಿ ನಿಲ್ಲದ ತಾಪಮಾನ ಕುಸಿತ: ಯೆಲ್ಲೋ ಅಲರ್ಟ್​ ಘೋಷಣೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಸ್ಥಾನದಲ್ಲಿ ನಿಲ್ಲದ ತಾಪಮಾನ ಕುಸಿತ: ಯೆಲ್ಲೋ ಅಲರ್ಟ್​ ಘೋಷಣೆ…!

ರಾಜಸ್ಥಾನದಲ್ಲಿ ತಾಪಮಾನ ಕ್ರಮೇಣವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆ 24 ಗಂಟೆಗಳ ಕಾಲ ರಾಜ್ಯ ಸರ್ಕಾರ ರಾಜಸ್ಥಾನದ ಕೆಲ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ನಾಲ್ಕು ಸೆಲ್ಸಿಯಸ್​​ಗೆ ತಾಪಮಾನ ಇಳಿಕೆಯಾಗಿರೋದ್ರಿಂದ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ ಅಂತಾ ಎಂಇಟಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಭಾನುವಾರ ರಾತ್ರಿ ಚುರು ಪ್ರದೇಶ 1.9 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಿಸಿದೆ. ಗಂಗಾನಗರದಲ್ಲಿ 3.9 ಡಿಗ್ರಿ ಸೆಲ್ಸಿಯಸ್​​ನಷ್ಟು ತಾಪಮಾನ ದಾಖಲಾಗಿದೆ. ಇನ್ನುಳಿದಂತೆ ಪಿಲಾನಿ 3.9 ಡಿಗ್ರಿ ಸೆಲ್ಸಿಯಸ್​, ಸಿಕಾರ್​ 4 ಡಿಗ್ರಿ ಸೆಲ್ಸಿಯಸ್​, ಬಾರ್ಮರ್​ ಹಾಗೂ ಎರಾನ್​​ 5 ಡಿಗ್ರಿ ಸೆಲ್ಸಿಯಸ್​, ಬಿಕೆನಾರ್​ 5.4 ಡಿಗ್ರಿ ಸೆಲ್ಸಿಯಸ್​​ ಹಾಗೂ ಫಲೋಡಿಯಲ್ಲಿ 6.8 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ಈ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯಲ್ಲೋ ಅಲರ್ಟ್​ ಘೋಷಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...