ರಿಷಭ್ ಪಂತ್, ಚೇತೇಶ್ವರ ಪೂಜಾರ, ಶುಬ್ಮನ್ ಗಿಲ್ ಅರ್ಧಶತಕದ ನಂತ್ರವೂ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಿದೆ.
ನಾಲ್ಕು ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು 1-1 ಅಂಕದೊಂದಿಗೆ ಸಮಬಲ ಸಾಧಿಸಿವೆ. ಬ್ರಿಸ್ಬೇನ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಮೇಲೆ ಉಭಯ ತಂಡಗಳ ಕಣ್ಣಿದೆ.
ಆತಿಥೇಯರು, ಭಾರತದ ಮುಂದೆ ಗೆಲ್ಲಲು 407 ರನ್ ಗುರಿ ನೀಡಿದ್ದರು. ಗುರಿ ಬೆನ್ನು ಹತ್ತಿದ ಭಾರತ ಐದನೇ ದಿನ ಪೂರ್ಣ 90 ಓವರ್ಗಳನ್ನು ಆಡಿದೆ. ಒಂದು ಸಮಯದಲ್ಲಿ ಪಂದ್ಯ ಟೀಂ ಇಂಡಿಯಾ ಕೈ ತಪ್ಪಿ ಹೋಗುವ ಸಾಧ್ಯತೆಯಿತ್ತು. ಆದ್ರೆ ಪೂಜಾರ ಮತ್ತು ಪಂತ್ 148 ರನ್ಗಳ ಆಟ ಭಾರತಕ್ಕೆ ಬಲ ನೀಡಿತ್ತು. ನಂತರ ಆರ್ ಅಶ್ವಿನ್ ಮತ್ತು ಹುನುಮ ವಿಹಾರಿ ಭಾರತಕ್ಕೆ ಗೋಡೆಯಾದ್ರು.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 338 ರನ್ ಗಳಿಸಿತ್ತು. ಇದರ ನಂತರ ಭಾರತ ತಂಡ 244 ರನ್ ಗಳಿಸಲು ಸಾಧ್ಯವಾಯಿತು. ಆತಿಥೇಯರು ಎರಡನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ಗೆ 312 ರನ್ಗಳಿಸಿ ಡಿಕ್ಲರ್ ಘೋಷಣೆ ಮಾಡಿದ್ದರು.