alex Certify 10 ತಿಂಗಳ ಸವಾಲಿನ ಅವಧಿ ಬಳಿಕ ಪ್ರದರ್ಶನಕ್ಕೆ ಅಣಿಯಾದ ರ್ಯಾಂಬೋ ಸರ್ಕಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ತಿಂಗಳ ಸವಾಲಿನ ಅವಧಿ ಬಳಿಕ ಪ್ರದರ್ಶನಕ್ಕೆ ಅಣಿಯಾದ ರ್ಯಾಂಬೋ ಸರ್ಕಸ್

ಕಳೆದ ವರ್ಷದ ಮಾರ್ಚ್​ನಲ್ಲಿ ಲಾಕ್​ಡೌನ್​ ಘೋಷಣೆ ಮಾಡಿದ ವೇಳೆ ಒತ್ತಾಯ ಪೂರ್ವಕವಾಗಿ ಪ್ರಸಿದ್ಧ ಹಾಗೂ ಪುರಾತನ ರ್ಯಾಂಬೋ ಸರ್ಕಸ್​ ಕೂಡ ಬಂದ್​ ಆಗಿತ್ತು.

ಇದೀಗ ಮತ್ತದೇ ಉತ್ಸಾಹದೊಂದಿಗೆ ಈ ತಿಂಗಳಿನಿಂದ ರ್ಯಾಂಬೋ ಸರ್ಕಸ್​ ಪ್ರದರ್ಶನ ಕಾಣುತ್ತಿದೆ. ಮುಂಬೈನಲ್ಲಿ ರ್ಯಾಂಬೋ ಸರ್ಕಸ್​ ನಿತ್ಯ ಪ್ರದರ್ಶನ ನೀಡುತ್ತಿದೆ. ಈ ರ್ಯಾಂಬೋ ಸರ್ಕಸ್​ ಕೊರೊನಾ ವೈರಸ್​​ ತೀವ್ರವಾಗಿದ್ದ ಕಠಿಣ ಕಾಲದಲ್ಲೂ ಆನ್​ಲೈನ್ ವೇದಿಕೆ​ ಮೂಲಕ ತನ್ನ ಉದ್ಯಮವನ್ನ ಮುಂದುವರಿಸಿತ್ತು. ಕಳೆದ 10 ತಿಂಗಳು ನಮ್ಮ ಪಾಲಿಗೆ ಅಗ್ನಿ ಪರೀಕ್ಷೆಯಂತಿತ್ತು ಅಂತಾ ರ್ಯಾಂಬೋ ಬಿಜು ಹೇಳಿದ್ರು.

ಕೊರೊನಾ ವೈರಸ್​ನಿಂದಾಗಿ ನಮ್ಮ ಶೋ ನಿಂತ ಸಂದರ್ಭದಲ್ಲಿ ಯುವ ಸಿಬ್ಬಂದಿ ಖಿನ್ನತೆಗೆ ಒಳಗಾಗಿದ್ದರು. ನಾನು ನನ್ನ ಸಿಬ್ಬಂದಿಗೆ ಈ ಸಂದರ್ಭದಲ್ಲಿ ಎಷ್ಟು ಸಹಾಯ ಮಾಡೋಕೆ ಆಗುತ್ತೋ ಅದೆಲ್ಲವನ್ನೂ ಮಾಡಿದ್ದೇನೆ. ನಮ್ಮ ಶೋ ಯಾವಾಗ ಆರಂಭವಾಗುತ್ತೆ ಎಂದು ಗೊತ್ತಿಲ್ಲದೇ ಹೋದರೂ ಸಹ ನಾವು ನಿತ್ಯ ಶೋ ಪ್ರ್ಯಾಕ್ಟಿಸ್​ ಮಾಡುತ್ತಿದ್ದೆವು. ಈ ತರಬೇತಿ ಅವಧಿಯಿಂದಾಗಿ ನನ್ನ ಸಿಬ್ಬಂದಿಯನ್ನ ಖಷಿಯಾಗಿ ಇಡೋಕೆ ಸಾಧ್ಯವಾಯ್ತು. ಕಷ್ಟವನ್ನ ನಾವು ಒಟ್ಟಾಗಿ ಎದುರಿಸಿದೆವು. ಅಲ್ಲದೇ ಒಬ್ಬರಿಗೊಬ್ಬರು ಕಷ್ಟಕ್ಕೆ ಆಸರೆಯಾದೆವು ಅಂತಾ ಹೇಳ್ತಾರೆ ಬಿಜು.

ರ್ಯಾಂಬೋ ಸರ್ಕಸ್​ ಮಾಲೀಕ ದಿಲೀಪ್​ ಕೂಡ ಈ 10 ತಿಂಗಳನ್ನ ಸವಾಲಾಗಿ ಸ್ವೀಕರಿಸಿದ್ರು. ಸಿಬ್ಬಂದಿಗೆ ಊಟ ಹಾಕಲಿಕ್ಕೋಸ್ಕರ ತಮ್ಮ ಚಿನ್ನವನ್ನೂ ಮಾರಿದ್ದಾರೆ. ಈ ಎಲ್ಲ ಸವಾಲಿನ ನಡುವೆಯೂ ರ್ಯಾಂಬೋ ಸರ್ಕಸ್​ ಇದೀಗ ತನ್ನ ಪ್ರದರ್ಶನಕ್ಕೆ ಸಜ್ಜಾಗಿದೆ. ಬುಕ್​ ಮೈ ಶೋ ಜೊತೆ ಸೇರಿ ಈ ರ್ಯಾಂಬೋ ಸರ್ಕಸ್​ ಡಿಜಿಟಲ್​ ವೇದಿಕೆಯಲ್ಲೂ ಪ್ರದರ್ಶನ ಕಾಣುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...