ಸರ್ಕಾರಿ ಟೆಲಿಕಾಂ ಕಂಪನಿ ಬಿ ಎಸ್ ಎನ್ ಎಲ್ ಹೊಸ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಉಚಿತವಾಗಿ ಸಿಮ್ ಕಾರ್ಡ್ ನೀಡುವ ಭರವಸೆ ನೀಡಿದೆ. ಎಲ್ಲಾ ಹೊಸ ಗ್ರಾಹಕರಿಗೆ 20 ರೂಪಾಯಿ ಬೆಲೆಯ ಸಿಮ್ ಕಾರ್ಡನ್ನು ಉಚಿತವಾಗಿ ನೀಡುತ್ತಿದೆ.
ವರದಿಯ ಪ್ರಕಾರ, ಈ ಕೊಡುಗೆ ಪಡೆಯಲು ಗ್ರಾಹಕರು 100 ರೂಪಾಯಿಗಿಂತ ಹೆಚ್ಚಿನ ರಿಚಾರ್ಜ್ ಮಾಡಬೇಕು. ಜನವರಿ 16ವರೆಗೆ ಗ್ರಾಹಕರು ಉಚಿತವಾಗಿ ಸಿಮ್ ಪಡೆಯಬಹುದಾಗಿದೆ.
ಕಳೆದ ವರ್ಷವೂ ಬಿಎಸ್ಎನ್ಎಲ್ ತನ್ನ ಚಂದಾದಾರರನ್ನು ಹೆಚ್ಚಿಸಲು ಕನಿಷ್ಠ 100 ರೂಪಾಯಿಗಳ ರೀಚಾರ್ಜ್ ಗೆ ಉಚಿತ ಸಿಮ್ ಕಾರ್ಡ್ ನೀಡುವುದಾಗಿ ಘೋಷಿಸಿತ್ತು.
ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಬಿ ಎಸ್ ಎನ್ ಎಲ್ ಹೊಸ ಹೊಸ ಕೊಡುಗೆಗಳನ್ನು ನೀಡ್ತಿದೆ. ಕೆಲ ದಿನಗಳ ಹಿಂದೆ ಬಿ ಎಸ್ ಎನ್ ಎಲ್ ಗಣರಾಜ್ಯೋತ್ಸವ 2021 ಯೋಜನೆ ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ 1,999 ರೂಪಾಯಿಗಳ ಯೋಜನೆ ಸಿಂಧುತ್ವವನ್ನು 21 ದಿನಗಳವರೆಗೆ ಹಾಗೂ 2,399 ರೂಪಾಯಿಗಳ ಯೋಜನೆಯ ಸಿಂಧುತ್ವವನ್ನು 72 ದಿನಗಳವರೆಗೆ ಹೆಚ್ಚಿಸಲಾಗಿದೆ.