ಬ್ಯಾಂಕ್ ಗಳು ತನ್ನ ಬಳಕೆದಾರರಿಗೆ ಆಗಾಗ ಸುರಕ್ಷತೆ ಬಗ್ಗೆ ಎಚ್ಚರಿಕೆ ನೀಡುತ್ತಿರುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ತನ್ನ ಎಟಿಎಂ ಬಳಕೆದಾರರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಎಟಿಎಂ ಕಾರ್ಡ್ ಗಳನ್ನು ಬಳಸುವಾಗ 9 ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಬ್ಯಾಂಕ್ ಹೇಳಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಟ್ವಿಟ್ ಮಾಡುವ ಮೂಲಕ ಭದ್ರತಾ ಸಲಹೆಗಳನ್ನು ನೀಡಿದೆ. ಎಟಿಎಂನಲ್ಲಿ ಪಿನ್ ಹಾಕುವ ವೇಳೆ ಕಿಬೋರ್ಡನ್ನು ಇನ್ನೊಂದು ಕೈನಿಂದ ಮುಚ್ಚುವಂತೆ ಬ್ಯಾಂಕ್ ಹೇಳಿದೆ. ಪಿನ್ ವಿವರವನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಬ್ಯಾಂಕ್ ಸೂಚನೆ ನೀಡಿದೆ. ಎಟಿಎಂ ಕಾರ್ಡ್ ಮೇಲೆ ಎಂದಿಗೂ ಪಿನ್ ಸಂಖ್ಯೆಯನ್ನು ಬರೆಯಬೇಡಿ ಎಂದು ಬ್ಯಾಂಕ್ ಹೇಳಿದೆ.
ಫೋನ್ ಮೂಲಕ ಇಲ್ಲವೆ ಇ-ಮೇಲ್ ಮೂಲಕ ಅಥವಾ ಇನ್ನಾವುದೇ ಮಾಧ್ಯಮದ ಮೂಲಕ ನಿಮ್ಮ ಎಟಿಎಂ ಪಿನ್ ನಂಬರ್ ಹಂಚಿಕೊಳ್ಳಬೇಡಿ. ವಹಿವಾಟಿನ ಕಾಗದವನ್ನು ಕಂಡಲ್ಲಿ ಎಸೆಯಬೇಡಿ. ಬ್ಯಾಂಕ್ ಖಾತೆ ಹಾಗೂ ಫೋನ್ ನಂಬರ್ ಲಿಂಕ್ ಮಾಡುವುದನ್ನು ಮರೆಯಬೇಡಿ. ಪಿನ್ ಬದಲಾವಣೆ ಸೇರಿದಂತೆ ಬ್ಯಾಂಕ್ ವಹಿವಾಟಿನ ವೇಳೆ ಬರುವ ಯಾವುದೇ ಒಟಿಪಿಯನ್ನು ಹಂಚಿಕೊಳ್ಳಬೇಡಿ. ಎಟಿಎಂ ಕೀಬೋರ್ಡ್ ಬಳಿ ಕ್ಯಾಮರಾ ಅಳವಡಿಸಿರುವ ಸಾಧ್ಯತೆಯಿರುತ್ತದೆ. ಇದನ್ನು ಪರಿಶೀಲಿಸಿಕೊಳ್ಳಿ.