ನವದೆಹಲಿ: ಬಡವರು, ಮಧ್ಯಮ ವರ್ಗದವರು ಮನೆ ಕಟ್ಟುವುದು ಕನಸಿನ ಮಾತಾಗಿದೆ. ಇತ್ತೀಚೆಗೆ ಸಿಮೆಂಟ್ ಮತ್ತು ಉಕ್ಕಿನ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಮರಳು ಕೂಡ ಸರಿಯಾಗಿ ಸಿಗುತ್ತಿಲ್ಲ.
ರಾಜ್ಯ ಸರ್ಕಾರ ಮರಳು ನೀತಿ ಜಾರಿ ಮಾಡಿ ಸುಲಭವಾಗಿ ಮರಳು ಸಿಗುವಂತೆ ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರ ಸಿಮೆಂಟ್ ಮತ್ತು ಉಕ್ಕಿನ ದರ ನಿಯಂತ್ರಿಸಬೇಕೆಂದು ಒತ್ತಾಯ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಸಿಮೆಂಟ್ ಮತ್ತು ಉಕ್ಕಿನ ಉದ್ಯಮಗಳು ದರ ಹೆಚ್ಚಳ ಮಾಡುವುದನ್ನು ನಿಯಂತ್ರಿಸಲು ಸಂಸ್ಥೆ ರಚಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸಿಮೆಂಟ್ ಮತ್ತು ಉಕ್ಕಿನ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ದರ ಏರಿಕೆ ಕಾಯ್ದುಕೊಳ್ಳಲು ಕಂಪನಿಗಳು ಮುಂದಾಗಿದ್ದು, ಇದು ದೇಶಕ್ಕೆ ಮಾರಕವಾದ ಪ್ರಕ್ರಿಯೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಕಾರ್ಮಿಕರು ಮತ್ತು ವಿದ್ಯುತ್ ವೆಚ್ಚ ಏರಿಕೆಯಾಗದಿದ್ದರೂ ಅದಿರು ನಿಕ್ಷೇಪ ಹೊಂದಿದ ಅನೇಕ ಕಂಪನಿಗಳು ಉಕ್ಕಿನ ದರವನ್ನು ಏಕಾಏಕಿ ಹೆಚ್ಚಿಸಿವೆ. ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿ ಸಿಮೆಂಟ್ ಮತ್ತು ಉಕ್ಕಿನ ದರ ಹೆಚ್ಚಳ ತಡೆಯಲು ನಿಯಂತ್ರಣ ಸಂಸ್ಥೆ ಸ್ಥಾಪಿಸುವುದಾಗಿ ತಿಳಿಸಿದ್ದಾರೆ.