ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಕ್ಷಾಂತರ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಮುಕ್ತಾಯದ ಅವಧಿಯಲ್ಲಿರುವ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಎಸ್‌ಬಿಐ ಹೆಚ್ಚಿಸಿದೆ. ಒಂದರಿಂದ ಎರಡು ವರ್ಷಗಳವರೆಗಿನ ಎಫ್‌ಡಿ ಬಡ್ಡಿ ದರವನ್ನು 10 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ. ಹೊಸ ದರಗಳು ಜನವರಿ 20ರಿಂದ ಜಾರಿಗೆ ಬರಲಿವೆ.
2 ಕೋಟಿಗಿಂತ ಕಡಿಮೆ ಇರುವ ಎಫ್ಡಿ ಗಳ ಮೇಲೆ ಈ ಹೊಸ ಬಡ್ಡಿ ದರ ಜನವರಿ 8ರಿಂದಲೇ ಜಾರಿಗೆ ಬಂದಿದೆ. ಈ ಹಿಂದೆ ಎಸ್ಬಿಐ ಸೆಪ್ಟೆಂಬರ್ 10 ರಂದು ಬಡ್ಡಿದರಗಳನ್ನು ಪರಿಷ್ಕರಿಸಿತ್ತು. 7 ದಿನಗಳಿಂದ 45 ದಿನಗಳವರೆಗಿನ ಎಫ್‌ಡಿಗಳಿಗೆ ಸದ್ಯ ಶೇಕಡಾ 2.9 ದರದಲ್ಲಿ ಬಡ್ಡಿ ಸಿಗ್ತಿದೆ. 46 ದಿನಗಳಿಂದ 179 ದಿನಗಳ ಎಫ್‌ಡಿ ಮೇಲೆ ಶೇಕಡಾ 3.9 ರಷ್ಟು, 180 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಇರುವ ಎಫ್‌ಡಿಗಳ ಮೇಲೆ ಶೇಕಡಾ 4.4 ರಷ್ಟು ಬಡ್ಡಿ ಸಿಗ್ತಿದೆ.
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಇರುವ ಎಫ್‌ಡಿಗಳ ಮೇಲೆ ಶೇಕಡಾ 4.4 ದರದಲ್ಲಿ ಬಡ್ಡಿ ಸಿಗ್ತಿದೆ. 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಇರುವ ಎಫ್‌ಡಿಗಳಿಗೆ ಶೇಕಡಾ 5ರಷ್ಟು ಬಡ್ಡಿ ಸಿಗುತ್ತದೆ. 2 ರಿಂದ 3 ವರ್ಷಕ್ಕಿಂತ ಕಡಿಮೆ ಇರುವ ಎಫ್‌ಡಿಗಳಿಗೆ ಶೇಕಡಾ 5.1 ದರದಲ್ಲಿ ಬಡ್ಡಿ ಸಿಗುತ್ತದೆ. 3 ರಿಂದ 5 ವರ್ಷದ ಎಫ್‌ಡಿಗಳ ಮೇಲೆ ಶೇಕಡಾ 5.3 ದರದಲ್ಲಿ ಬಡ್ಡಿ ನೀಡಲಾಗುತ್ತದೆ. 5 ವರ್ಷ ಮತ್ತು 10 ವರ್ಷಗಳ ಎಫ್‌ಡಿ ಮೇಲೆ ಶೇಕಡಾ 5.4 ದರದಲ್ಲಿ ಬಡ್ಡಿ ಸಿಗ್ತಿದೆ.