ಕೊರೊನಾ ವೈರಸ್ ಜೊತೆ ಜೊತೆಗೆ ಸದ್ಯ ದೇಶಕ್ಕೆ ಹಕ್ಕಿ ಜ್ವರದ ಸಮಸ್ಯೆಯೂ ಶುರುವಾಗಿದೆ. ಈ ಹಕ್ಕಿ ಜ್ವರ ಮನುಷ್ಯನಿಂದ ಮನುಷ್ಯನಿಗೆ ಹರಡೋದು ಅಪರೂಪ.
ಆದರೆ ಬೇಯಿಸದ ಅಥವಾ ಭಾಗಶಃ ಬೇಯಿಸಿದ ಮಾಂಸಗಳನ್ನ ಸೇವಿಸದಂತೆ ವೈದ್ಯರು ಸಲಹೆ ನೀಡ್ತಾರೆ. ಈ ರೋಗವು ಹಕ್ಕಿಗಳ ಎಂಜಲು, ಸೋಂಕಿತ ಹಕ್ಕಿ ಸ್ರವಿಕೆಯಿಂದ ಕಾಯಿಲೆ ಉಂಟಾಗಬಹುದಾಗಿದೆ.
ಪೊರ್ಟೀಸ್ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ನಿರ್ದೇಶಕ ಡಾ. ಜೆ.ಸಿ. ಸುರಿ ಹೇಳುವಂತೆ, ಪಕ್ಷಿಗಳ ನಿರ್ವಹಣೆಯಲ್ಲಿ ತೊಡಗಿರುವವರು ಮೊದಲು ಶಂಕಿತ ಪ್ರದೇಶಗಳನ್ನ ಸ್ವಚ್ಛಗೊಳಿಸಬೇಕು ಅಂತಾ ಸಲಹೆ ನೀಡಿದ್ದಾರೆ.
ವ್ಯಕ್ತಿಯ ಮೂಗು ಅಥವಾ ಬಾಯಿಗೆ ವೈರಸ್ ತಾಕಿದಾಗ ಸೋಂಕು ಮನುಷ್ಯನಿಗೂ ಮಾರಕವಾಗುವ ಸಾಧ್ಯತೆ ಇದೆ ಅಂತಾ ಅಮೆರಿಕದ ಅಧ್ಯಯನವೊಂದು ಹೇಳುತ್ತೆ. ಸೋಂಕಿತ ಪಕ್ಷಿಗಳು ಹಾಗೂ ಶಂಕಿತ ಪ್ರದೇಶಗಳಲ್ಲಿ ಅಸುರಕ್ಷಿತ ಸಂಪರ್ಕದ ಬಳಿಕ ಹೆಚ್ಚಿನ ಜನರಲ್ಲಿ ಸೋಂಕು ಸಂಭವಿಸಿದೆ. ಅನಾರೋಗ್ಯವು ಸೌಮ್ಯ ಲಕ್ಷಣದಿಂದ ತೀವ್ರವಾಗುತ್ತೆ. ಜ್ವರ, ಕೆಮ್ಮು, ಗಂಟಲು ನೋವು, ಉಸಿರುಗಟ್ಟುವಿಕೆ ಹಾಗೂ ಸ್ನಾಯು ಸೆಳೆತ, ತಲೆ ನೋವು, ಕಣ್ಣಿನ ನೋವು ಇದರ ಲಕ್ಷಣವಾಗಿದೆ.