ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ, ಹೊಂಬಾಳೆ ಫಿಲಂಸ್ ವಿಜಯ ಕಿರಗಂದೂರು ನಿರ್ಮಾಣದಲ್ಲಿ ಮೂಡಿಬಂದಿರುವ ‘ಕೆಜಿಎಫ್ 2’ ಟೀಸರ್ ಬಿರುಗಾಳಿ ಎಬ್ಬಿಸಿದೆ.
ಬಿಡುಗಡೆಯಾದ 44 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 100 ಮಿಲಿಯನ್ ಗೂ ಅಧಿಕ ಜನ ಟೀಸರ್ ವೀಕ್ಷಿಸಿದ್ದು 54 ಲಕ್ಷಕ್ಕೂ ಅಧಿಕ ಲೈಕ್ ಸಿಕ್ಕಿದೆ. ಯಶ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಬೇಕಿದ್ದ ಟೀಸರ್ ನಿಗದಿತ ಸಮಯಕ್ಕಿಂತ ಮೊದಲೇ ರಿಲೀಸ್ ಆಗಿತ್ತು.
ಟೀಸರ್ ಲಿಕ್ ಆಗಿದ್ದರಿಂದ ಅಭಿಮಾನಿಗಳು ಮತ್ತು ಚಿತ್ರತಂಡಕ್ಕೆ ಆತಂಕ ಎದುರಾಗಿತ್ತು. ಆದರೆ, ಟೀಸರ್ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಯುಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿದೆ. ಭಾರೀ ಹವಾ ಸೃಷ್ಟಿಸಿರುವ ‘ಕೆಜಿಎಫ್ 2’ ಬಿಡುಗಡೆಗೂ ಮುನ್ನವೇ ಭರ್ಜರಿ ಯಶಸ್ಸು ಕಂಡಿದೆ.
https://twitter.com/hombalefilms/status/1347883559055314946