ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಂದು ಕಾನೂನು ಹೋರಾಟಕ್ಕೆ ಅಣಿಯಾಗುವ ಪ್ರಸಂಗ ಎದುರಾಗಿದೆ.
ಪ್ರತಿಭಟನಾ ನಿರತ ರೈತ ಮಹಿಳೆಯನ್ನ ಶಹೀನಾಬಾಗ್ ಮಹಿಳೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಟ್ವೀಟ್ ಮಾಡಿದ್ದ ಕಂಗನಾ ವಿರುದ್ಧ ರೈತ ಮಹಿಳೆ ಮಹಿಂದರ್ ಕೌರ್ ಐಪಿಸಿ ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಭಟಿಂಡ ಕೋರ್ಟ್ ಜನವರಿ 11ಕ್ಕೆ ವಿಚಾರಣೆಯ ದಿನಾಂಕವನ್ನ ಫಿಕ್ಸ್ ಮಾಡಿದೆ.
ಈ ದೂರಿನಲ್ಲಿ 73 ವರ್ಷದ ಮಹಿಂದರ್ ಕೌರ್, ನನ್ನನ್ನ ಶಹೀನಾಬಾಗ್ ಪ್ರತಿಭಟನೆಯಲ್ಲಿ ಭಾಗಿಯಾದ ಮಹಿಳೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಕಂಗನಾ ಟ್ವಿಟರ್ನಲ್ಲಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾಳೆ. ಇದರಿಂದ ನನ್ನ ಘನತೆಗೆ ಧಕ್ಕೆ ಉಂಟಾಗಿದೆ. ಅಲ್ಲದೇ ನಾನು ಇದರಿಂದ ಮಾನಸಿಕವಾಗಿ ಕುಗ್ಗಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬತಿಂಡಾದ ಬಹದುರ್ಗಾ ಜಂಡಿಯನ್ ನಿವಾಸಿಯಾಗಿರುವ ಕೌರ್, ಕಂಗನಾ ಈವರೆಗೆ ತಾವು ಮಾಡಿದ ತಪ್ಪಿಗಾಗಿ ನನ್ನ ಬಳಿ ಕ್ಷಮೆಯಾಚಿಸಿಲ್ಲ ಅಂತಾನೂ ಹೇಳಿದ್ದಾರೆ.
ರೈತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೌರ್ರನ್ನ ಬಿಲ್ಕೀಸ್ ಬಾನೋ ಎಂದು ತಪ್ಪಾಗಿ ಅರ್ಥೈಸಿಕೊಂಡ ಕಂಗನಾ ಟ್ವಿಟರ್ನಲ್ಲಿ ಶಹೀನಾ ಬಾಗ್ ದಾದಿ ಎಂದು ಕರೆದಿದ್ದರು. ಈ ಟ್ವೀಟ್ ವಿರುದ್ದ ಬಾಲಿವುಡ್ ಗಾಯಕ ದಲ್ಜೀತ್ ಕೌರ್ ಕೂಡ ದನಿ ಎತ್ತಿದ್ದರು. ಟ್ವಿಟರ್ನಲ್ಲಿ ಭಾರೀ ವಿರೋಧ ವ್ಯಕ್ತವಾದ ಬಳಿಕ ಕಂಗನಾ ತಮ್ಮ ಟ್ವೀಟನ್ನ ಅಳಿಸಿ ಹಾಕಿದ್ದರು.