ಸಿರಿಂಜ್ ಆಕಾರದ ಕೇಕ್ ತಯಾರಿಸಿ ಸುದ್ದಿಯಾಯ್ತು ಬೇಕರಿ..! 10-01-2021 7:58AM IST / No Comments / Posted In: Latest News, International ಪಶ್ಚಿಮ ಜರ್ಮನಿಯ ಪಟ್ಟಣವಾದ ಡಾರ್ಟ್ಮಂಡ್ನ ಬೇಕರಿಯೊಂದರಲ್ಲಿ ಕೊರೊನಾ ವೈರಸ್ ವಿಶ್ವಕ್ಕೆ ಅಪ್ಪಳಿಸಿ ವರ್ಷ ಪೂರ್ಣಗೊಂಡ ನೆನಪಿಗಾಗಿ ಸಿರಿಂಜ್ ಆಕಾರದ ಕೇಕ್ಗಳನ್ನ ತಯಾರಿಸಲಾಗಿದೆ. ಡಾರ್ಟ್ಮಂಡ್ನ ಬೇಕರಿ ಈ ರೀತಿಯ ವಿಚಿತ್ರವಾದ ಕೇಕುಗಳನ್ನ ತಯಾರು ಮಾಡಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಲಾಕ್ಡೌನ್ ಭೀತಿಯಿಂದ ಸೂಪರ್ ಮಾರ್ಕೆಟ್ಗೆ ಒಂದೊಂದೇ ಅಗತ್ಯ ಸಾಮಗ್ರಿಗಳ ಕಣ್ಮರೆಯಾಗುತ್ತಿದ್ದ ವೇಳೆ ಟಾಯ್ಲೆಟ್ ರೋಲ್ ಆಕಾರದ ಕೇಕ್ಗಳನ್ನ ತಯಾರಿಸಿ ಸುದ್ದಿಯಾಗಿತ್ತು. ಈಗಾಗಲೇ ಕೊರೊನಾ ಲಸಿಕೆಯನ್ನ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ನೀಡಲಾಗ್ತಿದೆ. ಆದರೂ ಸಹ ಕೆಲವರಿಗೆ ಇನ್ನೂ ಕೊರೊನಾ ಲಸಿಕೆಗಳ ಮೇಳೆ ಅನುಮಾನ ಹೋಗಿಲ್ಲ. ಹೀಗಾಗಿ ನೀವು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಈ ಸಿರಿಂಜ್ ಕೇಕ್ನ್ನ ಸ್ವೀಕರಿಸಬಹುದಾಗಿದೆ. ಅಲ್ಲದೇ ನೀವು ಬೇಕು ಅಂದರೆ ಮತ್ತೊಂದು ಸಿರಿಂಜ್ ಖರೀದಿ ಮಾಡಬಹುದು. ಯಾಕೆಂದರೆ ಈ ಸಿರಿಂಜ್ ಬಹಳ ರುಚಿಕರವಾಗಿದೆ ಅಂತಾ ಬೇಕರಿ ಮಾಲೀಕ ಹಾಸ್ಯ ಚಟಾಕಿ ಹಾರಿಸಿದ್ದಾರೆ. A German bakery is celebrating the arrival of the coronavirus vaccine with syringe-shaped cakes. This is not the bakery’s first virus-themed creation, last year they sold cakes designed to look like toilet paper https://t.co/t6BRlclWsr pic.twitter.com/vES4MS85Ui — Reuters (@Reuters) January 9, 2021