ಒಟ್ಟಾವಾ: ವಾಹನದಲ್ಲಿ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಗೆ ರಸ್ತೆಯ ಪಕ್ಕದಲ್ಲಿ ತುಂಡಾದ ಕಾಲುಗಳ ಹೆಜ್ಜೆಗಳು ಕಾಣಿಸಿದವು. ಕೆಲವೇ ನಿಮಿಷದಲ್ಲಿ ಆತಂಕಿತ ವ್ಯಕ್ತಿಯೊಬ್ಬ ಅದೇ ದಾರಿಯಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋದ.
ಇಲ್ಲೇನೋ ದೊಡ್ಡ ರಕ್ತಪಾತ ಅಥವಾ ಅಪರಾಧ ನಡೆದಿದೆ ಎಂಬ ಅನುಮಾನದ ಮೇಲೆ ಹುಡುಕಾಡಿದ ಪೊಲೀಸ್ ಸಿಬ್ಬಂದಿಗೆ ಆಶ್ಚರ್ಯ ಕಾದಿತ್ತು. ಹೆಜ್ಜೆ ಗುರುತನ್ನು ಹಿಂಬಾಲಿಸಿ ಹೋದರೆ ಅಲ್ಲಿ ಯಾವುದೋ ಕೊಲೆ ನಡೆದಿರಲಿಲ್ಲ. ಬದಲಾಗಿ ಪ್ಲಾಸ್ಟಿಕ್ ಗೊಂಬೆಯ ಮುರಿದ ಕಾಲುಗಳು ಸಿಕ್ಕಿದ್ದವು.
ಇದು ಯಾವುದೋ ನಿಗೂಢ ಸಿನೆಮಾ ಕಥೆಯಲ್ಲ. ಕೆನಡಾ ದೇಶದ ಡೆಲ್ಟಾ ಪೊಲೀಸರಿಗಾದ ನಿಜವಾದ ಅನುಭವ. ಕೆನಡಾ ಪೊಲೀಸ್ ಇಲಾಖೆ ಫೇಸ್ ಬುಕ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದು, ಯಾರಾದರೂ ತಮ್ಮ ಪ್ಲಾಸ್ಟಿಕ್ ಗೊಂಬೆಯ ಕಾಲುಗಳನ್ನು ಕಳೆದುಕೊಂಡಿದ್ದರೆ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
While out on foot in Ladner, an officer is stopped by a driver passing by. The driver appears quite distraught and…Posted by Delta Police Department onTuesday, January 5, 2021