ಜಿರಾಫೆಗಳು ಎಂದರೆ ಎತ್ತರದ ತಲೆ ಸಾಮಾನ್ಯ ಆದರೆ, ಇಲ್ಲೆರಡು ಕುಳ್ಳ ಜಿರಾಫೆಗಳು ಕಂಡು ಬಂದಿದ್ದು ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿವೆ.
ಉಗಾಂಡಾದ ಜಿಮ್ಲಿ ಹಾಗೂ ನಮಿಬಿಯಾದ ನಿಂಗೆಲ್ ಎಂಬ ಎರಡು ಜಿರಾಫೆಗಳು ಅತಿ ಕುಳ್ಳಗಿವೆ. ಜಿರಾಫೆಗಳು ಸಾಮಾನ್ಯವಾಗಿ ಕನಿಷ್ಠ16 ಅಡಿ ಎತ್ತರವಿರುತ್ತವೆ. ಆದರೆ, ಜಿಮ್ಲಿ 9 ಅಡಿ 4 ಇಂಚು ಎತ್ತರವಿದ್ದು, ನಿಂಗೆಲ್ 8.5 ಅಡಿ ಎತ್ತರವಿದೆ.
ಡ್ವಾರ್ಫಿಸಂ ಎಂಬ ಕಾಯಿಲೆಯಿಂದ ಈ ಎರಡು ಜಿರಾಫೆಗಳು ಹೀಗಾಗಿವೆ ಎಂದು ಹೇಳಲಾಗಿದೆ. ಈ ಕಾಯಿಲೆ ಮನುಷ್ಯ, ಆಕಳು ಅಥವಾ ನಾಯಿಗೆ ಬರುತ್ತದೆ. ಆದರೆ ಕಾಡಿನಲ್ಲಿರುವ ಜಿರಾಫೆಗೆ ಹೇಗೆ ಬಂತು ಎಂಬುದು ಅಚ್ಚರಿಗೆ ಕಾರಣವಾಗಿದೆ.