ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆ ಮುಂದುವರೆದಿದೆ. ಗ್ರಾಹಕರನ್ನು ಸೆಳೆಯಲು ಎಲ್ಲ ಕಂಪನಿಗಳು ಹೊಸ ಹೊಸ ಅಗ್ಗದ ಸೌಲಭ್ಯಗಳನ್ನು ಜಾರಿಗೆ ತರ್ತಿವೆ. ಇದ್ರಲ್ಲಿ ಸರ್ಕಾರಿ ಕಂಪನಿ ಬಿ ಎಸ್ ಎನ್ ಎಲ್ ಕೂಡ ಹೊರತಾಗಿಲ್ಲ. ಬಿಎಸ್‌ಎನ್‌ಎಲ್‌ನ ಹೊಸ ಪ್ರಿಪೇಯ್ಡ್ ಯೋಜನೆ ಬಿಡುಗಡೆ ಮಾಡಿದೆ. ಇದ್ರ ಬೆಲೆ 398 ರೂಪಾಯಿ.
ವಿಶೇಷವೆಂದರೆ ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ ಮತ್ತು ಇಂಟರ್ನೆಟ್ ಡೇಟಾ ನೀಡಲಾಗುತ್ತಿದೆ. ಇದರರ್ಥ ಯೋಜನೆಯಲ್ಲಿ ಯಾವುದೇ ಎಫ್‌ಯುಪಿ ಮಿತಿಯನ್ನು ನೀಡಲಾಗಿಲ್ಲ. ಈ ಯೋಜನೆಯಲ್ಲಿ ಗ್ರಾಹಕರು ಬಯಸಿದಷ್ಟು ಇಂಟರ್ನೆಟ್ ಬಳಸಬಹುದು. ಜೊತೆಗೆ ಭಾರತದ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮಾಡಬಹುದು. ಈ ಯೋಜನೆ 30 ದಿನಗಳ ಸಿಂಧುತ್ವ ಹೊಂದಿದೆ. ಈ ಸಂದರ್ಭದಲ್ಲಿ ಗ್ರಾಹಕರು ಎಫ್ ಯು ಪಿ ಮಿತಿಯ ಬಗ್ಗೆ ಚಿಂತಿಸಬೇಕಾಗಿಲ್ಲ.
ಬಿ ಎಸ್ ಎನ್ ಎಲ್ ಈ ಯೋಜನೆಯಲ್ಲಿ ಧ್ವನಿ ಕರೆ ಹಾಗೂ ಡೇಟಾ ಹೊರತಾಗಿ 100 ಎಸ್ಎಂಎಸ್ ಲಭ್ಯವಾಗ್ತಿದೆ. ಬಿ ಎಸ್ ಎನ್ ಎಲ್ ಈ 398 ರೂಪಾಯಿ ಯೋಜನೆಯನ್ನು ಕಂಪನಿ ನಾಳೆ ಅಂದ್ರೆ ಜನವರಿ 10ರಿಂದ ಗ್ರಾಹಕರಿಗೆ ನೀಡ್ತಿದೆ. ದೇಶದ ಎಲ್ಲ ಜನರಿಗೆ ಈ ಯೋಜನೆ ಲಭ್ಯವಿದೆ.