2020-21 ರ ಐಟಿಆರ್ ಸಲ್ಲಿಸಲು ಎರಡು ದಿನಗಳು ಬಾಕಿ ಇದ್ದು, ಜನವರಿ 9 ಮತ್ತು 10 ರಂದು ಐಟಿಆರ್ ಫೈಲ್ ಮಾಡಬಹುದು. ದಿನಾಂಕ ಮುಗಿದ್ರೆ ನೀವು ದಂಡ ವಿಧಿಸಬೇಕಾಗುತ್ತದೆ. ಕೊರೊನಾ ಕಾರಣಕ್ಕೆ ಈ ದಿನಾಂಕವನ್ನು ಡಿಸೆಂಬರ್ 31, 2020 ರಿಂದ ಜನವರಿ 10 ರವರೆಗೆ ವಿಸ್ತರಿಸಲಾಗಿದೆ. ಈವರೆಗೆ 2,09,235 ಐಟಿಆರ್ ಸಲ್ಲಿಸಲಾಗಿದೆ. ಆನ್ಲೈನ್ ಮೂಲಕ ಕೂಡ ನೀವು ಇದನ್ನು ಸಲ್ಲಿಸಬಹುದು.
ಉದ್ಯೋಗಿಗಳಾಗಿದ್ದರೆ ಫಾರ್ಮ್ 16 ಎ ತೆಗೆದುಕೊಳ್ಳಿ.ಇದ್ರಲ್ಲಿ ತೆರಿಗೆ ಕಡಿತದ ವಿವರ ಹಾಗೂ ಉದ್ಯೋಗದ ಮಾಹಿತಿಯನ್ನೊಳಗೊಂಡಿರುತ್ತದೆ. ಉದ್ಯೋಗ,ಪಿಂಚಣಿದಾರರು ಮತ್ತು ಸ್ವಯಂ ಉದ್ಯೋಗಿಗಳೆಲ್ಲೂ ಫಾರ್ಮ್ 15 ಹೆಚ್ ತುಂಬಿ ಬ್ಯಾಂಕ್ ಗೆ ನೀಡಬೇಕು. ಬಡ್ಡಿ ಪ್ರಮಾಣಪತ್ರವನ್ನು ಇಟ್ಟುಕೊಳ್ಳಬೇಕು.ಬ್ಯಾಂಕುಗಳು ಟಿಡಿಎಸ್ ಅನ್ನು ಕಡಿತಗೊಳಿಸುತ್ತವೆ. ಅದೇ ಸಮಯದಲ್ಲಿ, 10 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.ವಿಮಾ ಪಾಲಿಸಿಯ ಹೂಡಿಕೆಯ ವಿವರಗಳು, ಗೃಹ ಸಾಲದ ಇಎಂಐ ಮತ್ತು ಇತರ ತೆರಿಗೆ ವಿನಾಯಿತಿ ಹೂಡಿಕೆ ದಾಖಲೆಗಳನ್ನು ಇಟ್ಟುಕೊಂಡಿರಬೇಕು.
ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ, ಬಳಕೆದಾರ ಐಡಿ, ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಲಾಗಿನ್ ಮಾಡಿ. ಇ-ಫೈಲ್ ಮೆನು ಕ್ಲಿಕ್ ಮಾಡಿ ನಂತರ ಆದಾಯ ತೆರಿಗೆ ರಿಟರ್ನ್ ಗಾಗಿ ಲಿಂಕ್ ಕ್ಲಿಕ್ ಮಾಡಿ.ಆದಾಯ ತೆರಿಗೆ ರಿಟರ್ನ್ ಪುಟದಲ್ಲಿ ಪ್ಯಾನ್ ನಂಬರ್ ತುಂಬಿ. ಮೌಲ್ಯಮಾಪನ ವರ್ಷ, ಐಟಿಆರ್ ಫಾರ್ಮ್ ಸಂಖ್ಯೆ ಹಾಕಿ ಪ್ರಿಪೇರ್ ಆಂಡ್ ಸಬ್ಮಿಟ್ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ. ಇದರ ನಂತ್ರ Continue ಮೇಲೆ ಕ್ಲಿಕ್ ಮಾಡಿ. ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅದನ್ನು ಓದಿದ ನಂತರ ಅದನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ. ಫಾರ್ಮ್ ಭರ್ತಿ ಮಾಡಿದ ನಂತರ, ಪೂರ್ವವೀಕ್ಷಣೆ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ. ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದರೆ ಮತ್ತು ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದ್ದರೆ ಒಟಿಪಿ ಯೊಂದಿಗೆ ಇ-ಪರಿಶೀಲನೆಯನ್ನು ಪೂರ್ಣಗೊಳಿಸಿ. ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ನೀವು ಐಟಿಆರ್ ಅನ್ನು ಸಲ್ಲಿಸಬಹುದು.