ಬಾಲಿವುಡ್ ನಟಿ ಕಂಗನಾ ರಣಾವತ್ ತಾನು ಮಾನಸಿಕವಾಗಿ, ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಹಿಂಸೆಗೆ ಒಳಗಾಗಿದ್ದೇನೆ ಅಂತಾ ಆರೋಪಿಸಿದ್ದಾರೆ. ಅಲ್ಲದೇ ನನಗಾಗುತ್ತಿರುವ ಚಿತ್ರಹಿಂಸೆಗಳ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳದಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ ಕಂಗನಾ, ತಮ್ಮ ವಿರುದ್ಧ ದಾಖಲಾಗಿರುವ ದೂರುಗಳು, ಪ್ರತಿದಿನ ಎದುರಿಸುತ್ತಿರುವ ಚಿತ್ರಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಮಧ್ಯಕಾಲೀನ ಯುಗದಲ್ಲಿ ಮಹಿಳೆಯರನ್ನ ಸಜೀವವಾಗಿ ಸುಡಲಾಗುತ್ತಿತ್ತು. ನಾವೀಗ ಇದೆ ಯುಗಕ್ಕೆ ಹಿಂದಿರುಗುತ್ತಿದ್ದೇವೆ ಅಂತಾ ಹೇಳಿಕೊಂಡಿದ್ದಾರೆ.
ನಾನು ರಾಷ್ಟ್ರದ ಹಿತಾಸಕ್ತಿ ಬಯಸಿ ಮಾತನಾಡಲು ಆರಂಭಿಸಿದಾಗಿನಿಂದ ನನಗಾಗುತ್ತಿರುವ ನೋವನ್ನ ಇಡೀ ದೇಶ ನೋಡುತ್ತಿದೆ. ನನ್ನ ಮನೆಯನ್ನ ಅಕ್ರಮ ನಡೆಸಿ ಮುರಿದು ಹಾಕಲಾಯ್ತು. ನಾನು ರೈತರ ಹಿತದೃಷ್ಟಿಯಿಂದ ಮಾತನಾಡಿದ್ರೂ ಸಹ ನನ್ನ ವಿರುದ್ಧ ಪ್ರಕರಣ ದಾಖಲು ಮಾಡಲಾಯ್ತು. ನಾನು ನಕ್ಕಿದ್ದಕ್ಕೂ ನನ್ನ ವಿರುದ್ಧ ದೂರು ದಾಖಲಾಗಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವೈದ್ಯರು ಹಿಂಸೆ ಮಾಡಿದರು ಎಂದು ನನ್ನ ಸಹೋದರಿ ರಂಗೋಲಿ ನಡೆಸಿದ ಪ್ರತಿಭಟನೆಯಲ್ಲೂ ನನ್ನನ್ನ ಎಳೆದು ತರಲಾಯ್ತು. ಯಾವ ಕಾರಣ ಎಂದು ತಿಳಿಯದೇ ಹೋದರೂ ಸಹ ಪೊಲೀಸ್ ಠಾಣೆಯಲ್ಲಿ ಹಾಜರಿ ನೀಡುವಂತೆ ಆದೇಶಿಸಲಾಗಿದೆ. ಆದರೆ ನನಗಾಗುತ್ತಿರುವ ಚಿತ್ರಹಿಂಸೆ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳಬೇಡಿ ಅಂತಾ ಹೇಳಲಾಗಿದೆ. ನಾನು ಯಾಕೆ ಮಾನಸಿಕವಾಗಿ, ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಹಿಂಸೆಗೆ ಒಳಗಾಗುತ್ತಿದ್ದೇನೆ….? ನನಗೆ ಈ ರಾಷ್ಟ್ರದಿಂದ ಉತ್ತರ ಬೇಕಾಗಿದೆ. ನೀವು ನನ್ನ ಪರ ನಿಲ್ಲುವ ಸಮಯ ಬಂದಿದೆ ಅಂತಾ ಟ್ವೀಟ್ ಮಾಡಿದ್ದಾರೆ.
https://twitter.com/i/status/1347433867683131393