alex Certify ವಿಶ್ವಕ್ಕೆ ಕೊರೊನಾ ವ್ಯಾಪಿಸಿದ ಬಳಿಕ ಮೊದಲ ಸಾವು ದಾಖಲಿಸಿದ ಭೂತಾನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವಕ್ಕೆ ಕೊರೊನಾ ವ್ಯಾಪಿಸಿದ ಬಳಿಕ ಮೊದಲ ಸಾವು ದಾಖಲಿಸಿದ ಭೂತಾನ್…!

ಕೊರೊನಾ ವೈರಸ್​ ವಿಶ್ವಕ್ಕೆ ಅಪ್ಪಳಿಸಿದ ಒಂದು ವರ್ಷದ ಬಳಿಕ ಭೂತಾನ್​ ಮೊದಲ ಕೊರೊನಾ ವೈರಸ್​​ ಸಾವನ್ನ ದಾಖಲಿಸಿದೆ.

ದೀರ್ಘಕಾಲದ ಯಕೃತ್ತಿನ ಕಾಯಿಲೆ ಹೊಂದಿದ್ದ 34 ವರ್ಷದ ವ್ಯಕ್ತಿ, ರಾಜಧಾನಿ ಥಿಂಪುವಿನ ಆಸ್ಪತ್ರೆಯಲ್ಲಿ ಡಿಸೆಂಬರ್​ 23ರಂದು ಕೊರೊನಾ ವೈರಸ್​ ಸೋಂಕಿಗೆ ಗುರಿಯಾಗಿದ್ದರು. ಇದೀಗ ಈ ರೋಗಿ ಸಾವನ್ನಪ್ಪಿದ್ದು ಆರೋಗ್ಯ ಸಚಿವಾಲಯ ಅವರ ಸಾವನ್ನ ಅಪಾರ ದುಃಖದಿಂದ ಘೋಷಣೆ ಮಾಡಿದೆ.

ಭಾರತ ಹಾಗೂ ಚೀನಾ ನಡುವೆ ಇರುವ ಈ ಸಣ್ಣ ರಾಷ್ಟ್ರವು ಕಳೆದ ವರ್ಷ ಮಾರ್ಚ್​ನಿಂದ ಎಲ್ಲಾ ವಿಮಾನಯಾನಗಳನ್ನ ನಿಷೇಧಿಸಿದೆ. ಕಳೆದ ಹಲವಾರು ತಿಂಗಳಿನಿಂದ ಇಲ್ಲಿ ಯಾವುದೇ ವಿದೇಶಿ ಪ್ರವಾಸಿಗರು ಬಂದಿಲ್ಲ ಅಂತಾ ಸರ್ಕಾರ ಸ್ಪಷ್ಟನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...