ದೇಶದಲ್ಲಿ ಲಾಕ್ಡೌನ್ ಜಾರಿಯಾದ ಸಮಯದಲ್ಲಿ ಬಹುತೇಕ ಕಂಪನಿಗಳು ತಮ್ಮ ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ಸೌಲಭ್ಯವನ್ನ ನೀಡಿವೆ. ಇದರಲ್ಲಿ ಕೆಲ ಕಂಪನಿಗಳು ಇನ್ನೂ ಈ ವ್ಯವಸ್ಥೆಯನ್ನ ಮುಂದುವರಿಸಿವೆ.
ಆಫೀಸಿನಲ್ಲಿ ಹಾಯಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ನಾಲ್ಕು ಗೋಡೆಯೊಳಗೆ ಕೆಲಸ ಮಾಡೋಕೆ ಹೇಗೆ ಅನಿಸ್ತಿದೆ ಎಂದು ಕೇಳಿದ ಪ್ರಶ್ನೆಗೆ ವರ್ಕ್ ಫ್ರಂ ಹೋಂ ಉದ್ಯೋಗಿಗಳು ಕ್ರೇಜಿ ಉತ್ತರ ನೀಡಿದ್ದಾರೆ.
ಬಹುತೇಕ ಕಂಪನಿಗಳು ಈಗಾಗಲೇ ವರ್ಕ್ ಫ್ರಂ ಹೋಂ ಅಂತ್ಯಗೊಳಿಸಿ ಕಚೇರಿ ಕೆಲಸ ಆರಂಭಿಸಿವೆ. ಆದರೆ ಇನ್ನೂ ಮನೆಯಲ್ಲೇ ಇರುವ ಅನೇಕ ಸಿಬ್ಬಂದಿ ವರ್ಕ್ ಫ್ರಂ ಹೋಂ ಮುಗಿಸಿ ಆದಷ್ಟು ಬೇಗ ಕಚೇರಿಗೆ ಸೇರಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದಾರೆ. ಹೊಸ ಸಮೀಕ್ಷೆಯೊಂದರಲ್ಲಿ ಈ ಅಂಶ ಬಯಲಾಗಿದೆ.
ಡಿಸೆಂಬರ್ 29 ಹಾಗೂ ಜನವರಿ 3ರಂದು 1015 ಮಂದಿಯ ಅಭಿಪ್ರಾಯ ಸಂಗ್ರಹಿಸಲಾಯ್ತು. ಇದರಲ್ಲಿ ಪ್ರತಿ ಹತ್ತು ಮಂದಿಯಲ್ಲಿ 7 ಜನರು ಕಚೇರಿಗೆ ವಾಪಸ್ಸಾಗೋಕೆ ಆಸಕ್ತಿ ತೋರಿದ್ದಾರೆ. ಇನ್ನು ಪ್ರತಿ ಹತ್ತರಲ್ಲಿ ಮೂರು ಮಂದಿ ಸಂಪೂರ್ಣ ದೇಶ ಲಸಿಕೆ ಹೊಂದಿದ ಬಳಿಕ ಕಚೇರಿ ತೆರೆಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.